ನಾಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ

dcc
ಶಿವಮೊಗ್ಗ ಡಿಸಿಸಿ ಬ್ಯಾಂಕ್
Published on

ಶಿವಮೊಗ್ಗ: ಡಿಸಿಸಿ ( ಜಿಲ್ಲಾ ಕೇಂದ್ರ ಸಹಕಾರ ) ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜು. 11ರಂದು ಚುನಾವಣೆ ನಡೆಯಲಿದೆ. ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಹೆಚ್ಚಿದ್ದು, ಅಧ್ಯಕ್ಷರಾಗಿ ಆರ್.ಎಂ.ಮಂಜುನಾಥ ಗೌಡ ಆಯ್ಕೆಯಾಗುವುದು ಖಚಿತವಾಗಿದೆ.

ಜೂ. 28ರಂದು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆದಿತ್ತು. 13 ನಿರ್ದೇಶಕರ ಪೈಕಿ 11 ನಿರ್ದೇಶಕರು ಮಂಜುನಾಥ ಗೌಡರ ಪರವಾಗಿರುವುದರಿಂದ ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿಲ್ಲ. ಸದ್ಯಕ್ಕೆ ಗೌಡರ ಹಾದಿ ನಿರಾಳವಾಗಿದೆ.
ಹಿಂದೆಯೂ ಮಂಜುನಾಥ ಗೌಡ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಪಾಧ್ಯಕ್ಷರ ಆಯ್ಕೆಯೂ ಅವರ ಮಾತಿನಂತೆಯೇ ನಡೆಯುತ್ತಿತ್ತು. ಈಗ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ ಬಹುತೇಕರು ಆರ್‌ಎಂಎಂ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಕೆ.ಪಿ.ದುಗ್ಗಪ್ಪಗೌಡ, ಜಿ.ಎನ್.ಸುಧೀರ್ ಪೈಕಿ ಒಬ್ಬರು ಆರ್‌ಎಂಎಂ ಆಯ್ಕೆಯಾಗಬಹುದು.
ಇದೆಲ್ಲರ ಹೊರತಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಯಾರ ಹೆಸರನ್ನಾದರೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರೆ ಮಂಜುನಾಥ ಗೌಡರು ತಳ್ಳಿ ಹಾಕುವ ಸಾಧ್ಯತೆಗಳು ಕಡಿಮೆ. ಈಗ ಏನಿದ್ದರೂ ಉಪಾಧ್ಯಕ್ಷ ಸ್ಥಾನ ಯಾರಿಗೆ ಎಂಬುದಷ್ಟೇ ಕುತೂಹಲದ ಸಂಗತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net