ಚುನಾವಣಾ ಅಕ್ರಮ; ನಗದು ಸೇರಿ 262 ಕೋಟಿ ಮೌಲ್ಯದ ವಸ್ತು ವಶ

ECI
Published on

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಜತೆ ಜತೆಗೇ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೂ ಚುನಾವಣಾ ಅಕ್ರಮಗಳ ಬೆನ್ನು ಬಿದ್ದಿದ್ದಾರೆ.

ಚುನಾವಣಾ ಆಯೋಗದ ಪೊಲೀಸ್, ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳ ಜತೆಗೆ ಆದಾಯ ತೆರಿಗೆ ಇಲಾಖೆ ಕೂಡ ದಾಳಿ ಆರಂಭಿಸಿದೆ. ಈಗ ವಾಣಿಜ್ಯ ತೆರಿಗೆ ಇಲಾಖೆಯೂ ಚುನಾವಣಾ ಅಕ್ರಮ ಪತ್ತೆಗೆ ಮುಂದಾಗಿದೆ. ಮಾ.16 ರಿಂದ ಈವರೆಗೆ ವಾಣಿಜ್ಯ ತೆರಿಗೆ ಇಲಾಖೆಯೊಂದೇ 65.79 ಕೋಟಿ ರೂ. ಮೌಲ್ಯದ ಚಿನ್ನಾಭಿರಣ, ಉಚಿತ ಉಡುಗೊರೆ ವಶಕ್ಕೆ ಪಡೆದಿದೆ.

ನೀತಿ ಸಂಹಿತೆ ಜಾರಿ ಬಳಿಕ ಈವರೆಗೆ ನಗದು ಸೇರಿದಂತೆ ಒಟ್ಟು 262.60 ಕೋಟಿ ರೂ.ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್/ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು 52.63 ಕೋಟಿ, ಅಬಕಾರಿ 133.20 ಕೋಟಿ, ಆದಾಯ ತೆರಿಗೆ ಇಲಾಖೆ 10.98 ಕೋಟಿ , ವಾಣಿಜ್ಯ ಇಲಾಖೆ 65.79 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net