ನಾಳೆಯೇ ಚುನಾವಣಾ ವೇಳಾಪಟ್ಟಿ ಪ್ರಕಟ..ಇಸಿಐ ಸಜ್ಜು..

eci
Published on

ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ದಿನಾಂಕ ಶನಿವಾರ ಪ್ರಕಟವಾಗಲಿದೆ. ಈ ಸಂಬಂಧ ಭಾರತೀಯ ಚುನಾವಣಾ ಆಯೋಗವು (ಇಸಿಐ) ವೇಳಾಪಟ್ಟಿಯನ್ನು ನಾಳೆ ಮಧ್ಯಾಹ್ನ 3ಗಂಟೆಗೆ ಪ್ರಕಟಿಸಲಿದೆ.

ಒಟ್ಟು 543 ಲೋಕಸಭಾ ಸ್ಥಾನಗಳಿಗೆ 8ರಿಂದ 9 ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಚುನಾವಣೆ ದಿನಾಂಕ ಘೋಷಣೆಯ ತತ್​ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಈಗಾಗಲೇ ಆಯೋಗವು ವಿವಿಧ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ಪೂರ್ಣಗೊಳಿಸಿದೆ.

EC Notification

2019 ರಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ಮಾರ್ಚ್ 10 ರಂದು ಘೋಷಿಸಲಾಗಿತ್ತು. ಏಳು ಹಂತದ ಚುನಾವಣೆ ಏಪ್ರಿಲ್ 11, 2019 ರಂದು ಪ್ರಾರಂಭವಾಗಿದ್ದು, ಮೇ 19, 2019 ರಂದು ಕೊನೆಗೊಂಡಿತು. ಮತಗಳ ಎಣಿಕೆಯನ್ನು ಮೇ 23 ರಂದು ಮಾಡಲಾಗಿತ್ತು. ಇದರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಅಧಿಕಾರಕ್ಕೆ ಮರಳಿತ್ತು. ಮೋದಿಯವರು 2 ನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಿದ್ದರು. 543 ಲೋಕಸಭಾ ಸ್ಥಾನಗಳಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಲು ಪ್ರಾರಂಭಿಸಿರುವುದು ತಿಳಿದ ಸಂಗತಿಯೇ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net