ಮೇ 2 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ: ವಿಜಯೋತ್ಸವಕ್ಕೆ ಅವಕಾಶ ಇಲ್ಲ ಎಂದ ಆಯೋಗ

Election Commission vvani
Election Commission
Published on

ನವದೆಹಲಿ: ಮೇ 2 ರಂದು ಪಂಚರಾಜ್ಯಗಳ (ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ) ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ದೇಶದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಕವಾಗಿರುವುದರಿಂದ ಚುನಾವಣಾ ಫಲಿತಾಂಶದ ಬಳಿಕ ಗೆದ್ದ ಅಭ್ಯರ್ಥಿಗಳು, ಅವರ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ವಿಜಯೋತ್ಸವ ಆಚರಿಸುವುದಕ್ಕೆ ಅವಕಾಶ ಇಲ್ಲ ಎಂದು ಭಾರತ್ ಚುನಾವಣಾ ಆಯೋಗ ಇಂದು ಆದೇಶ ಮಾಡಿದೆ.

ಅಲ್ಲದೇ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಜನ ಸೇರುವುದಕ್ಕೂ ಅವಕಾಶ ಇಲ್ಲ. ಗೆದ್ದ ಅಭ್ಯರ್ಥಿಗಳು ತನ್ನ ಇಬ್ಬರು ಬೆಂಬಲಿಗರೊಡನೆ ಮಾತ್ರ ಚುನಾವಣಾ ಫಲಿತಾಂಶದ ಪ್ರಮಾಣಪತ್ರವನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ ಎಂದು ಆಯೋಗ ಹೇಳಿದೆ.

ಇನ್ನು ಚುನಾವಣಾ ಆಯೋಗದ ಈ ಆದೇಶವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಸ್ವಾಗತಿಸಿದ್ದು, ಬಿಜೆಪಿ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಚುನಾವಣಾ ಆಯೋಗದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕರೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆಯ ಮೂರು ಹಂತದ ಚುನಾವಣೆಗಳಿಗೆ ಚುನಾವಣಾ ಆಯೋಗ, ಎಲ್ಲ ರೀತಿಯ ಸಾರ್ವಜನಿಕ ಚುನಾವಣಾ ಸಮಾವೇಶಗಳನ್ನು ರದ್ದು ಮಾಡಿ ಆದೇಶಿಸಿತ್ತು.

ದೇಶದಲ್ಲಿ ಕೋವಿಡ್ 19 ಸೋಂಕಿತರ ಪ್ರಕರಣಗಳು ಏರುಗತಿಯಲ್ಲಿ ಸಾಗಿದ್ದು ಮಂಗಳವಾರ 3.5 ಲಕ್ಷ ಜನರಿಗೆ ಮಾರಕ ಸೋಂಕು ತಗುಲಿದೆ. 2771 ಜನ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net