ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಿಸಿದ Election Commission

Voting
Published on

ನವದೆಹಲಿ: ಮೇ ತಿಂಗಳಲ್ಲಿ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ (Loksabha election) ಸಂಸದರಾಗಿ ಆಯ್ಕೆಯಾದ ಶಾಸಕರಿಂದ ತೆರವುಗೊಂಡಿರುವ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ (Election Commission) ಮತದಾನ ದಿನಾಂಕವನ್ನು ಘೋಷಿಸಿದೆ.

ಅದರಂತೆ ಚುನಾವಣಾ ಆಯೋಗವು (Election Commission) ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಿಸಲಾಗಿದ್ದು, ನವೆಂಬರ್​ 13ರಂದು ನಡೆಯಲಿದ್ದು, ನವೆಂಬರ್​ 23ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಚುನಾವಣಾ ಆಯೋಗದ ಆಯುಕ್ತರಾದ (Election Commission Chief) ರಾಜೀವ್ ಕುಮಾರ್​ ತಿಳಿಸಿದ್ದಾರೆ.

ಶಿಗ್ಗಾಂವಿ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಚನ್ನಪಟ್ಟಣ ಶಾಸಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ, ಸಂಡೂರು ಶಾಸಕರಾಗಿದ್ದ ತುಕಾರಂ ಅವರ ಬಳ್ಳಾರಿ ಲೋಕಸಭೆಗೆ ಪ್ರವೇಶಿಸಿದ ಬೆನ್ನಲ್ಲೇ ಶಾಸಕ ಸ್ಥಾನಗಳು ತೆರವಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net