ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್ (NewZealand) ಹಾಗೂ ಭಾರತ (Team India) ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು (Test Series) ಅಕ್ಟೋಬರ್ 16ರಂದು ಆರಂಭವಾಗಲಿದ್ದು, ಸರಣಿಯ ಮೊದಲ ಪಂದ್ಯವು ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ (Garden City Bengaluru) ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣವು ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದ್ದು, ಇದು ಈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 25ನೇ ಟೆಸ್ಟ್ ಪಂದ್ಯವಾಗಿದೆ (Test Match). ಆದರೆ, ಇದೀಗ ಈ ಪಂದ್ಯಕ್ಕೆ ಮಳೆ ಭೀತಿ (Rain Effect) ಎದುರಾಗಿದ್ದು, ನಿಗದಿತ ಸಮಯಕ್ಕೆ ಪಂದ್ಯ ನಡೆಯೋದು ಡೌಟ್ ಎಂದು ಹವಾಮಾನ ಇಲಾಖೆ (Weather Forecast) ಎಚ್ಚರಿಸಿದೆ.
ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿ (Weather Forecast) ಪ್ರಕಾರ ಬುಧವಾರ ಅಂದರೆ ಅಕ್ಟೋಬರ್ 16ರಂದು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಪಂದ್ಯ ನಡೆಯುವ ದಿನವೂ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಬೆಂಗಳೂರಿನಲ್ಲಿ ಶೇ.100 ರಷ್ಟು ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ 41% ಮಳೆಯಾಗಲಿದೆ. ಬೆಳಿಗ್ಗೆಯಿಂದಲೇ ತುಂತುರು ಮಳೆ ಶುರುವಾಗುವುದರಿಂದ ಪಂದ್ಯವು ತಡವಾಗಿ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ನೀಡಿದೆ.
ಮೊದಲನೇ ದಿನದಾಟ ಅಲ್ಲದೇ ಎರಡನೇ ದಿನಕ್ಕೂ ಅಂದರೆ ಗುರುವಾರ (ಅಕ್ಟೋಬರ್ 17) ಕಾಟವಿರಲಿದ್ದು, ಶೇ.40ರಷ್ಟು ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹಾಗೆಯೇ ಮೂರನೇ ದಿನದಾಟದ ಅಂದರೆ ಶುಕ್ರವಾರ (ಅಕ್ಟೋಬರ್ 18) ವೇಳೆ 67% ಮಳೆಯಾಗುವ ಸಾಧ್ಯತೆಯಿದೆ. ಕೊನೆಯ ಎರಡು ದಿನದಾಟಗಳಲ್ಲಿ ಕ್ರಮವಾಗಿ 25% ಮತ್ತು 24% ಮಳೆಯಾಗುವ ಸಾಧ್ಯತೆಯಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಸಂಪೂರ್ಣ ದಿನದಾಟ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಪಂದ್ಯ ಸ್ಥಗಿತಗೊಂಡರೂ ಮಳಯಿಂದಲ್ಲೇ ಎಂದು ಹೇಳಲಾಗಿದೆ.
ಇದನ್ನೂ ಓದಿ: Nijjar ಹತ್ಯೆ ಪ್ರಕರಣ; India-Canada ಜಟಾಪಟಿ, ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡ ಉಭಯ ದೇಶಗಳು
ಬಾಂಗ್ಲಾದೇಶವನ್ನು ಮಣಿಸಿ ಸಂಪೂರ್ಣ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ (Team India) ತನ್ನ ಗೆಲುವಿನ ಓಟವನ್ನು ಮುಂದುವರೆಸಲು ಸಜ್ಜಾಗಿದ್ದು, ಭರ್ಜರಿ ತಯಾತಿ ನಡೆಸುತ್ತಿದೆ. ಇನ್ನೂ ಈ ಕುರಿತು ಮಾತನಾಡಿರುವ ಟೀಮ್ ಇಂಡಿಯಾ (Team India) ಕೋಚ್ ಗೌತಮ್ ಗಂಭೀರ್ (Gautam Gambhir), ನ್ಯೂಜಿಲೆಂಡ್ (NewZealand) ತಂಡವು ಸಂಪೂರ್ಣ ವಿಭಿನ್ನವಾಗಿದ್ದು, ಗುಣಮಟ್ಟ ಹೊಂದಿರುವ ತಂಡವಾಗಿದೆ. ನಾವು ಮೊದಲು ಬ್ಯಾಟಿಂಗ್ ಮಾಡುತ್ತಿರಲಿ ಅಥವಾ ಬೌಲಿಂಗ್ ಮಾಡುತ್ತಿರಲಿ ಆಟಗಾರರನ್ನು ಸ್ವಿಚ್ ಆನ್ ಮಾಡುವುದು ಸಹಾಯಕ ಸಿಬ್ಬಂದಿಯ ಜವಾಬ್ದಾರಿಯಾಗಿದೆ ಎಂದು ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
ಟೀಮ್ ಇಂಡಿಯಾ: ರೋಹಿತ್ ಶರ್ಮಾ (Captain), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (Wicket Keeper), ಧ್ರುವ ಜುರೆಲ್ (Wicket Keeper), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು: ಮಯಾಂಕ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ ಮತ್ತು ಪ್ರಸಿದ್ಧ್ ಕೃಷ್ಣ
ನ್ಯೂಜಿಲೆಂಡ್: ಟಾಮ್ ಲೇಥಮ್ (Captain), ಟಾಮ್ ಬ್ಲಂಡೆಲ್ (Wicket Keeper), ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್ , ಇಶ್ ಸೋಧಿ, ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.