ಅಧ್ಯಕ್ಷರಾಗಿ ಎಂ.ನಾಗೇಂದ್ರ, ಉಪಾಧ್ಯಕ್ಷರಾಗಿ ಎಂ.ಶಿವಣ್ಣ ಆಯ್ಕೆ

ಮಾಡ್ರಹಳ್ಳಿ
Published on

ತಿ.ನರಸೀಪುರ: ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ನಾಗೇಂದ್ರ, ಉಪಾಧ್ಯಕ್ಷರಾಗಿ ಎಂ.ಶಿವಣ್ಣ ಆಯ್ಕೆಯಾದರು.


ಗ್ರಾಮದ ಡೇರಿ ಸಭಾಂಗಣದಲ್ಲಿ ಬುಧವಾರ ಚುನಾವಣಾ ಪ್ರಕ್ರಿಯೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಂ.ನಾಗೇಂದ್ರ ಹಾಗೂ ಎಂ.ಬಿ.ಮಹದೇವಪ್ಪ ನಾಮಪತ್ರ ಸಲ್ಲಿಸಿದ್ದರು. ಎಂ.ನಾಗೇಂದ್ರ 7 ಮತಗಳನ್ನು ಪಡೆದು ಜಯಗಳಿಸಿದರೆ ಎಂ.ಬಿ.ಮಹದೇವಪ್ಪ 2 ಮತಗಳನ್ನು ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಶಿವಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಧನಲಕ್ಷ್ಮೀ ಅವಿರೋಧ ಆಯ್ಕೆ ಘೋಷಿಸಿದರು.


ಸಂಘದ ನಿರ್ದೇಶಕರಾದ ಕೆಂಪರಾಜು, ಎಂ.ಸಿ.ಮಹದೇವ ಪ್ರಸಾದ್, ರಂಗಯ್ಯ, ರಾಜಣ್ಣ, ಲತಾ, ಮಹದೇವಮ್ಮ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಾಡ್ರಹಳ್ಳಿ ಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನೆರಗ್ಯಾತನಹಳ್ಳಿ ಕುಮಾರಸ್ವಾಮಿ, ಗುರುಮೂರ್ತಿ, ಕಾರ್ಯ ನಿರ್ವಹಣಾಧಿಕಾರಿ ಎಂ.ಬಿ.ನಂಜುಂಡಸ್ವಾಮಿ, ಹಾಲು ಪರೀಕ್ಷಕ ಶೇಖರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net