

ಬೇಲೂರು: ತಾಲೂಕಿನ ಹೊನ್ನೇನಹಳ್ಳಿ ಜಮೀನಿನ ಬಳಿ ಚಿಕ್ಕ ಮನೆಯಲ್ಲಿ ವಾಸವಿದ್ದ 85 ವರ್ಷದ ವೃದ್ಧೆ ಈರಮ್ಮ ಎಂಬುವರು ಇತ್ತೀಚೆಗೆ ಕಾಣೆಯಾಗಿದ್ದು, ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈರಮ್ಮ ಕಳೆದ ಮಾ.12ರಂದು ಮಧ್ಯಾಹ್ನ ಜಮೀನಿನ ಹತ್ತಿರವಿದ್ದ ಮನೆಯಿಂದ ಕಾಣೆಯಾಗಿರುವ ಬಗ್ಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಕುಟುಂಬದವರು ದೂರು ದಾಖಲಿಸಿದ್ದಾರೆ. ವೃದ್ಧೆಯ ಮಾಹಿತಿ ಸಿಕ್ಕಲ್ಲಿ ಬೇಲೂರು ಪೊಲೀಸ್ ಠಾಣೆ ಮೊ: 9480804782/9480804757 ಸಂಪರ್ಕಿಸಬಹುದು.