

ನವದೆಹಲಿ: ಬಿಹಾರ ವಿಧಾನಸಭೆಯ ಮೂರನೇ ಮತ್ತು ಕೊನೆಯ ಹಂತದ ಮತದಾನ ಚಾಲ್ತಿಯಲ್ಲಿರುವಾಗಲೇ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಮಾಡಿರುವ ಟ್ವೀಟ್ ದೇಶದ ಗಮನಸೆಳೆದಿದೆ. ಜೆಡಿಯುಗೆ ಮತ ಚಲಾಯಿಸಿದ ವಯೋವೃದ್ಧನೋರ್ವನಿಗೆ ಆರ್ಜೆಡಿ ಬೆಂಬಲಿಗರು ಥಳಿಸಿದ್ದು, ಆತ ಅಳಲು ತೋಡಿಕೊಂಡಿರುವ ವಿಡಿಯೋ ಇದಾಗಿದೆ.
ವಯೋವೃದ್ಧನ ಹೆಸರು ಗಜೇಂದ್ರ ಸಾ. ಬರ್ಗಾಂವ್ ಗ್ರಾಮ ಪಂಚಾಯಿತಿಯ ಭವಾನಿಪುರದ ನಿವಾಸಿ. ಆತ ವಿಡಿಯೋದಲ್ಲಿ ಹೇಳಿರುವುದಿಷ್ಟು- ಬರ್ಗಾಂವ್ ಚೌಕ್ನಿಂದ ಮನೆ ಕಡೆಗೆ ಹೋಗುತ್ತಿದ್ದಾಗ ಎದುರಾದ ಆರ್ಜೆಡಿ ಬೆಂಬಲಿಗರು ಯಾರಿಗೆ ನಿಮ್ಮ ಮತ ಎಂದು ಕೇಳಿದ್ದಾರೆ. ನಾನು ಬಾಣದ ಗುರುತಿನವನು. ಅದಕ್ಕೇ ನನ್ನ ಮತ ಎಂದು ಹೇಳಿದ್ದೇ ತಡ, ಅವಾಚ್ಯ ಶಬ್ದಗಳಿಂದ ಬೈಯುತ್ತ ಲಾಟನ್ಗೆ ಯಾಕೆ ಮತ ಹಾಕಲ್ಲ ನೀನು ಎಂದು ಥಳಿಸಿದ್ರು ಎಂದು ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಮೂರನೇ ಮತ್ತು ಕೊನೆಯ ಹಂತದ ಮತದಾನ ಇಂದು
ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಅಮಿತ್ ಮಾಳವೀಯ, ಈ ವಿಡಿಯೋ ಮಧೇಪುರದಿಂದ ಲಭ್ಯವಾಗಿದೆ. ಆರ್ಜೆಡಿ ಬೆಂಬಲಿಗರು ವಯೋವೃದ್ಧರ ಮೇಲೆ ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಆರ್ಜೆಡಿ ಅಂದರೆ ಗೂಂಡಾ ರಾಜ್ ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)