ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ದಿಢೀರ್ ಕುಸಿದು ಸಾವು!

Untitled design (13)
Published on

ಉತ್ತರಪ್ರದೇಶ: ದೇಶದಲ್ಲಿ ಬಿಸಿ ಗಾಳಿ ವಿಪರೀತಗೊಂಡಿದ್ದು, ಜನರು ಗರಿಷ್ಠ ತಾಪಮಾನಕ್ಕೆ ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಉತ್ತರ ಭಾರತದ ಹಲವೆಡೆ ಉಷ್ಣಾಂಶ ತೀವ್ರ ಏರಿಕೆಯಾಗಿದೆ. ಉತ್ತರಪ್ರದೇಶದಲ್ಲಿ ದಾಖಲಾದ 40 ಡಿಗ್ರಿಗೂ ಅಧಿಕ ತಾಪಮಾನಕ್ಕೆ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದ ವೃದ್ಧರೊಬ್ಬರು ಕುಸಿದುಬಿದ್ದು ಸಾವಿಗೀಡಾಗಿದ್ದಾರೆ.

ಉತ್ತರಪ್ರದೇಶದಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವೃದ್ಧ ಮತದಾರರೊಬ್ಬರು ಬಿಸಿಲ ತಾಪ ತಾಳಲಾರದೆ ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ವೃದ್ಧನನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ ಕುಟುಂಬಸ್ಥರಿಗೆ ವೈದ್ಯರು ಅವರು ಮೃತಪಟ್ಟ ವಿಷಯವನ್ನು ದೃಢಪಡಿಸಿದ್ದಾರೆ. ಮೇ 31ರಂದು, 40ಕ್ಕೂ ಹೆಚ್ಚು ಸಾವುಗಳು ಬಿಸಿ ಗಾಳಿಯಿಂದಲೇ ಸಂಭವಿಸಿವೆ ಎಂದು ಇತ್ತೀಚಿನ ವರದಿ ಉಲ್ಲೇಖಿಸಿದೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ 13 ಚುನಾವಣಾ ಸಿಬ್ಬಂದಿ ಬಿಸಿಲಿನ ಹೊಡೆತಕ್ಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಏಳು ಗೃಹರಕ್ಷಕ ದಳದ ಸಿಬ್ಬಂದಿ, ಮೂವರು ನೈರ್ಮಲ್ಯ ಕಾರ್ಯಕರ್ತರು, ಮುಖ್ಯ ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಒಬ್ಬ ಗುಮಾಸ್ತ, ಒಬ್ಬ ಚಕ್ಬಂದಿ ಅಧಿಕಾರಿ ಮತ್ತು ಗೃಹ ರಕ್ಷಕ ತಂಡದ ಒಬ್ಬ ಜವಾನ ಸೇರಿದ್ದಾರೆ. ರಾಜಸ್ಥಾನ, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ತೀವ್ರವಾದ ಶಾಖದ ಅಲೆಗಳು ಮುಂದುವರೆದಿದ್ದು, ಜನರು ಎಚ್ಚರಿಕೆ ವಹಿಸುವಂತೆ ಐಎಂಡಿ ಸೂಚನೆ ನೀಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net