

ಪ್ಯಾರಿಸ್: ವಿಶ್ವದ ಪ್ರಸಿದ್ಧ ಪ್ರವಾಸಿತಾಣಗಳ ಪೈಕಿ ಒಂದಾದ ಐಫೆಲ್ ಟವರ್ಗೆ ಕಂಟಕ ಎದುರಾಗಿದ್ದು, ಶನಿವಾರ ಬಾಂಬ್ ಬೆದರಿಕೆ ಕರೆ ಬಂದಿದೆ. ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮೂರು ಮಹಡಿಗಳನ್ನು ತೆರವು ಮಾಡಲು ಅಲರ್ಟ್ ಘೋಷಿಸಲಾಗಿದೆ ಎಂದು ಫ್ರೆಂಚ್ ಪೊಲೀಸರು ತಿಳಿಸಿದ್ದಾರೆ.
ಮುನ್ನೆಚ್ಚರಿಕ ಕ್ರಮವಾಗಿ ಪ್ರವಾಸಗಿರನ್ನು ಸ್ಥಳಾಂತರಿಸಲಾಗಿದ್ದು, ಸಾರ್ವಜನಿಕರಿಗೆ ಮುಂದಿನ ಕೆಲವು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವರ್ಷದಲ್ಲೇ 60 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ವಿಶ್ವವಿಖ್ಯಾತ ಐಫೆಲ್ ಟವರ್ ವೀಕ್ಷಣೆ ಮಾಡಿದ್ದರು. ಬೆದರಿಕೆ ಹಿನ್ನಲೆ ಪೊಲೀಸರು ಮುನ್ನೆಚ್ಚರಿಕ ಕ್ರಮ ವಹಿಸಿದ್ದು, ಬಾಂಬ್ ನಿಷ್ಕ್ರಿಯಾ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಫ್ರಾನ್ಸ್‌ನ ಕೈಗಾರಿಕಾ ಕೌಶಲ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ ಈ ಗೋಪುರವನ್ನು ನಿರ್ಮಿಸಲಾಯಿತು. ಐಫೆಲ್ ಟವರ್ನ ನಿರ್ಮಾಣ ಕಾರ್ಯವು ಜನವರಿ 1887 ರಲ್ಲಿ ಪ್ರಾರಂಭವಾಯಿತು ಮತ್ತು ಮಾರ್ಚ್ 31, 1889 ರಂದು ಪೂರ್ಣಗೊಂಡಿತು. 1889 ರ ವಿಶ್ವ ಮೇಳದ ಸಮಯದಲ್ಲಿ ಎರಡು ಮಿಲಿಯನ್ ಪ್ರವಾಸಿಗರು ಐಫೆಲ್ ಟವರ್ಗೆ ಭೇಟಿ ನೀಡಿದ್ದರೂ.