ಕಿಡಿಗೇಡಿಗಳಿಗೆ ಪಾಠ ಕಲಿಸಿದ್ದೇವೆ: ಕೆ.ಎಸ್.ಈಶ್ವರಪ್ಪ

kse
Published on

ಕೆಲ ಕಿಡಿಗೇಡಿಗಳು ಶಿವಮೊಗ್ಗದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ನಡೆಸಿದ್ದರು. ಆದರೆ ರಾಜ್ಯ ಸರ್ಕಾರ ಸರಿಯಾಗಿ ಬುದ್ಧಿ ಕಲಿಸಿದ್ದರಿಂದ ಹಿಂದು ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗಲಿಲ್ಲ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ಇನ್ಮುಂದೆ ಯಾವುದೇ ಕಾರ್ಯಕ್ರಮ, ಸಮಾರಂಭ ನಡೆದರೂ ಶಾಂತಿ ಕಾಪಾಡಿಕೊಳ್ಳಲಾಗುವುದು. ಕೆಲವರು ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಸಿದ್ದರು. ಪೊಲೀಸ್ ಇಲಾಖೆ ಸರಿಯಾಗಿ ಬುದ್ಧಿ ಕಲಿಸಿದೆ. ಹಿಂದು ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಈ ಬಾರಿ ವೈಭವದಿಂದ ಕೂಡಿತ್ತು. ಎಲ್ಲ ವೃತ್ತಗಳಲ್ಲಿ ಮತ್ತು ಗಣಪತಿ ವಿಸರ್ಜನೆ ಆಗುವವರೆಗೂ ನನ್ನ ಜೀವನದಲ್ಲೇ ಲಕ್ಷಾಂತರ ಯುವಕರು, ಯುವತಿಯರು, ಮಹಿಳೆಯರು ಸೇರಿದ್ದನ್ನು ನೋಡಿಯೇ ಇರಲಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net