ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

BC Nagesh
Published on

ಬೆಳಗಾವಿ: ಸಾರ್ವಕರ್ ಫೋಟೋ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇದೀಗ ಗೃಹ ಸಚಿವ ಅರಗ ಜ್ಞಾನೇಂದ್ರ, ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸಿದ್ದಾರೆ.

ಸಾವರ್ಕರ್ ಬೆಳಗಾವಿಯ ಹಿಂಡಲಗಾ ಜೈಲಲ್ಲಿ 100 ದಿನಗಳ ಕಾಲ ವಿಚಾರಣಾಧೀನ ಕೈದಿಯಾಗಿ ಸೆರೆಮನೆವಾಸ ಅನುಭವಿಸಿದ್ದರು. ಈ ಕಾರಣಕ್ಕಾಗಿ ಇದೀಗ ಸಾವರ್ಕರ್ ಫೋಟೋವನ್ನು ಹಿಂಡಲಗಾ ಜೈಲಿನಲ್ಲಿ ಅನಾವರಣ ಮಾಡಲಾಗಿದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವರ್ಕರ್ ಫೋಟೋ ಅಳವಡಿಕೆ ಮಾಡಿರುವುದು ತೃಪ್ತಿ ತಂದಿದೆ. 12/8 ಅಡಿ ಜಾಗದ ಸಣ್ಣ ಕೋಣೆಯಲ್ಲಿ ಸಾವರ್ಕರ್ 100 ದಿನ ಕಳೆದಿದ್ದಾರೆ. ಅವರ ತ್ಯಾಗ ಎಲ್ಲರಿಗೂ ತಿಳಿಯಬೇಕು. ಹೀಗಾಗಿ ಹಿಂಡಲಗಾ ಜೈಲಿನಲ್ಲಿ ಅವರಿದ್ದ ಕೋಣೆಗೆ ಸಾವರ್ಕರ್ ಫೋಟೋ ಅಳವಡಿಸಿ ಬಂದಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೊಂಡಿದ್ದಾರೆ.

ಇದೇ ವೇಳೆ ಪಾಕ್ ಪ್ರಧಾನಿಯನ್ನು ವಿರೋಧಿಸಿ 100 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗಿ ಬಂತು. ರಾಷ್ಟ್ರದ ಯುವಕರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಬೇಕಾಗಿ ಅವಶ್ಯಕತೆ ಇದೆ. ಸಾವರ್ಕರ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕಾಂಗ್ರೆಸ್​ಗೆ ಅಲರ್ಜಿ ಇದೆ ಎಂದು ಸಚಿವ ಬಿ.ಸಿ.ನಾಗೇಶ್ ಪರೋಕ್ಷವಾಗಿ ಟಾಂಗ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net