

ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆಯ (TET) ಫಲಿತಾಂಶ ಇನ್ನು ಕೆಲವೇ ಸಮಯದಲ್ಲಿ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮೂಲಕ ಬುಧವಾರ ಸಂಜೆ ತಿಳಿಸಿದ್ದಾರೆ.
ನವೆಂಬರ್ 6ರಂದು ರಾಜ್ಯಾದ್ಯಂತ ಟಿಇಟಿ ಎಕ್ಸಾಂ ನಡೆದಿತ್ತು. ಪತ್ರಿಕೆ-1ಕ್ಕೆ 1,40,801 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪತ್ರಿಕೆ 2ಕ್ಕೆ 1,92,102 ಮಂದಿ ಹಾಜರಾಗಿದ್ದರು. ಈ ಪೈಕಿ ಪತ್ರಿಕೆ 1ರಲ್ಲಿ 20,070 ಅಭ್ಯರ್ಥಿಗಳು ಹಾಗೂ ಪತ್ರಿಕೆ 2ರಲ್ಲಿ 41,857 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.