ಶಿಕ್ಷಣ ರಾಮಬಾಣ

Education loan
Published on
ನಾವು ದೇಶದ ಮುಂದಿನ ಪ್ರಜೆಗಳಾಗುವ ಇಂದಿನ ಮಕ್ಕಳಿಗೆ ರಾಷ್ಟೀಯತೆ, ನಮ್ಮ ಸಂಸ್ಕೃತಿ, ವ್ಯಕ್ತಿತ್ವ ನಿರ್ಮಾಣ ಮತ್ತು ಜ್ಞಾನವನ್ನು ಶಿಕ್ಷಣದ ಮೂಲಕ ನೀಡಿದರೆ ನಮ್ಮ ಅನೇಕ ಸಮಸ್ಯೆಗಳು ಕ್ಷೀಣಿಸುತ್ತವೆ. ವಿಶ್ವವು ಶೇಕಡ 86.81 ಸಾಕ್ಷರತೆಯನ್ನು ಸಾಧಿಸಿದರೆ, ನಮ್ಮ ದೇಶವು ಶೇಕಡ 80.9 ಸಾಕ್ಷರತೆಯನ್ನು ಸಾಧಿಸಿರುವುದು ಮಹತ್ತರವಾದ ಸಂಗತಿ. ಆದರೆ ಇದರ ಜೊತೆಗೆ ಬೇರೆ ಬೇರೆ ಅಂಕಿ ಅಂಶಗಳನ್ನು ಕಂಡಾಗ ನಮ್ಮ ಹೃದಯವು ನಡುಗುತ್ತದೆ. ನಮ್ಮ ಜೀವನ ಮಟ್ಟ, ಶಿಕ್ಷಿತರ ಪ್ರಮಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಾವು ದಾಪುಗಾಲನ್ನು ಹಾಕುತ್ತಿದ್ದೇವೆ.

ಅದೇ ರೀತಿ ಸಾಮಾಜಿಕ, ನೈತಿಕಮೌಲ್ಯಗಳು ಕೂಡ ಅಷ್ಟೇ ವೇಗವಾಗಿ ಕುಸಿಯುತ್ತಿವೆ. ಮನುಷ್ಯನಿಗೆ ಎಲ್ಲಾ ಅನುಕೂಲತೆಗಳು ಇದ್ದರೂ ಒತ್ತಡದ ಶುಷ್ಕ ಜೀವನವನ್ನು ನಡೆಸುತ್ತಿರುವುದು ಸಾಮಾನ್ಯ ಸಂಗತಿ ಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸ್ಥಾಮಿ ವಿವೇಕಾನಂದರ ಶಿಕ್ಷಣವು ರಾಮಬಾಣವಾಗಿ, ಸರ್ವೌಷಧೀಯಾಗಿ ನೆರವಿಗೆ ಬರುತ್ತದೆ. ಹಾಗಾದರೆ ಶಿಕ್ಷಣ ಎಂದರೇನು? ಸಾಮಾನ್ಯವಾಗಿ ಶಿಕ್ಷಣವೆಂದರೆ ಜ್ಞಾರ್ನಾಜನೆ. ಓದುವಿಕೆ. ಕುಶಲತೆ, ಮೌಲ್ಯ, ನಂಬಿಕೆಯನ್ನು ಬೆಳೆಸುವಂಥದು ಎಂದು.

ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ಅಧಿಕಾರ, ಸಂಪತ್ತು, ಸವಲತ್ತುಗಳನ್ನು ಪಡೆಯುವ ಸಾಧನಕ್ಕೆ ಮೀಸಲಾಗಿದೆ. ಸಾಕ್ಷರತೆ (ಓದಲು, ಬರೆಯಲು ಬರುವುದು) ಅಥವಾ ಶಾಲೆಯಲ್ಲಿ ಕಲಿವ ವಿಷಯಗಳನ್ನೇ ಶಿಕ್ಷಣ ಎಂದು ಅನೇಕರು ಸೀಮಿತಗೊಳಿಸಿದ್ದಾರೆ. ಇದಕ್ಕೆ ನಿದರ್ಶನ ವೆಂಬಂತೆ ಮೆರಿಯಂ ಷೆಬ್​ಸ್ಟರ್ ನಿಘಂಟು ಶಿಕ್ಷಣ ಶಾಲೆ, ಕಾಲೇಜು ಮತ್ತು ವಿವಿಗಳಲ್ಲಿ ಮಾಡುವ ಬೋಧನಾ ಕ್ರಮ ಮತ್ತು ಅಲ್ಲಿ ವಿಷಯಗಳನ್ನು ಕಲಿಯುವಿಕೆ ಎಂದು ಅರ್ಥೈಸುತ್ತದೆ. ವಿದ್ಯಾ ಕೇಂದ್ರಗಳಲ್ಲಿ ಯಾವುದೇ ವಿಷಯದಲ್ಲಿ ಪರಿಣಿತಿ ಹೊಂದಿದಾಗ ನಮಗೆ ಶಿಕ್ಷಣವು ದೊರಕಿದೆ ಎಂದು ತಿಳಿಯಬಹುದು ಎಂದು ಮತ್ತೊಂದು ನಿಘಂಟು ಶಿಕ್ಷಣವನ್ನು ವ್ಯಾಖ್ಯಾನಿಸುತ್ತದೆ. ಇಂತಹ ಸಂಕುಚಿತ ವ್ಯಾಖ್ಯಾನವನ್ನು ಶಿಕ್ಷಣದ ಕುರಿತು ಹೊಂದಿರುವುದರಿಂದಲೇ ನಮ್ಮ ಸಮಾಜವು ಇಂತಹ ಅವ್ಯವಸ್ಥೆಗೆ ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net