ವಿದ್ಯೆ ಯಾರೂ ಕದಿಯಲಾಗದ ಸಂಪತ್ತು

16 nrp 2.
ಎನ್.ಆರ್.ಪುರದ ಟಿಎಪಿಸಿಎಂಎಸ್ ಸೊಸೈಟಿಯಿಂದ 5 ಚಿನ್ನದ ಪದಕ ಪಡೆದ ಎ.ತೃಪ್ತಿ ಹಾಗೂ ಪಾಲಕರನ್ನು ಸನ್ಮಾನಿಸಲಾಯಿತು. ಬೆಮ್ಮನೆ ಮೋಹನ್,ಡಿ.ಆರ್.ನಾಗರಾಜ್, ಎಸ್.ಗೋಪಾಲ್, ಮೀನಾಕ್ಷಿ ಕಾಂತರಾಜ್,ಎಂ.ಟಿ.ಕುಮಾರ ಇದ್ದರು.
Published on

ಎನ್.ಆರ್.ಪುರ: ಯಾರೂ ಕದಿಯಲಾಗದ ಸಂಪತ್ತೆಂದರೆ ವಿದ್ಯೆ ಮಾತ್ರ ಎಂದು ಟಿಎಪಿಸಿಎಂಎಸ್ ಸೊಸೈಟಿ ಅಧ್ಯಕ್ಷ ಬೆಮ್ಮನೆ ಮೋಹನ್ ಹೇಳಿದರು.
ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಶನಿವಾರ 5 ಚಿನ್ನದ ಪದಕಗಳನ್ನು ಪಡೆದ ಎ.ತೃಪ್ತಿ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಲಕರ ಆಸೆ, ನಿರೀಕ್ಷೆಯಂತೆ ತೃಪ್ತಿ 5 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ನಮ್ಮ ತಾಲೂಕಿಗೆ ಇದು ಹೆಮ್ಮೆಯ ವಿಷಯ. ಇಷ್ಟು ಸಾಧನೆ ಮಾಡಲು ಪ್ರೋತ್ಸಾಹಿಸಿದ ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ತೃಪ್ತಿ ಮೇಲಿದೆ ಎಂದರು.
ಸಾಹಿತಿ ಕೆ.ಪಿ.ಮೀನಾಕ್ಷಿ ಕಾಂತರಾಜ್ ಮಾತನಾಡಿ, ಪ್ರತಿಭೆಯನ್ನುವುದು ಗುಡಿಸಲಿನಿಂದ ಹುಟ್ಟಿ, ಅರಮನೆಯವರೆಗೂ ಬೆಳೆಯಬೇಕು. ಯಶಸ್ಸಿಗೆ ವಿಶಿಷ್ಟವಾದ ರಂಗಿದೆ. ವಿದ್ಯಾರ್ಥಿನಿಯರು ಜೀವನದಲ್ಲಿ ಬರುವ ಎಲ್ಲ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯ ಇಟ್ಟುಕೊಳ್ಳಬೇಕು. ಇಂದು ಹೆಣ್ಣು ಪುರುಷ ಪ್ರಧಾನ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ವಿಷಯ ಎಂದರು.
ಸೊಸೈಟಿ ಮಾಜಿ ಅಧ್ಯಕ್ಷ ಜಾನಕೀರಾಮ್ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗೆ ಸೊಸೈಟಿಯಿಂದ ಸನ್ಮಾನ ಮಾಡುತ್ತಿರುವುದು ಇದೇ ಮೊದಲು. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುವುದು ಬೇರೆಯವರಿಗೆ ಸ್ಪೂರ್ತಿಯಾಗಲಿದೆ. ಪಾಲಕರು ಪ್ರತಿಭೆ ಇರುವ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಸನ್ಮಾನವನ್ನು ಸ್ವೀಕರಿಸಿ ಎ.ತೃಪ್ತಿ ಮಾತನಾಡಿ, ಪಾಲಕರು ಮಕ್ಕಳಿಗೆ ಆಸಕ್ತಿ ಇಲ್ಲದ ವಿಷಯಗಳಿಗೆ ಒತ್ತಾಯ ಮಾಡುವ ಬದಲು ಆಸಕ್ತಿ ಇರುವುದಕ್ಕೆ ಪ್ರೋತ್ಸಾಹ ನೀಡಬೇಕು.ಪ್ರಯತ್ನ ಪಟ್ಟಷ್ಟು ಲ ನಮಗೆ ಲಭಿಸುತ್ತದೆ ಎಂದರು.
ಉಪಾಧ್ಯಕ್ಷ ಡಿ.ಆರ್.ನಾಗರಾಜು, ನಿರ್ದೇಶಕರಾದ ಎಂ.ಟಿ.ಕುಮಾರ, ಎಸ್.ಗೋಪಾಲ, ಗುಳದಮನೆ ಪ್ರಕಾಶ್, ಸುಧಾಕರ್, ರಾಮಚಂದ್ರ, ಸೀತಾರಾಮ್, ರಂಗಪ್ಪ, ಮಳಲಿಶ್ರೀ ನಿವಾಸ್, ಕಾರ್ಯದರ್ಶಿ ಕಾಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net