

Education Expo-2025 ಮೈಸೂರು: ನಂ.1 ಕನ್ನಡ ದಿನಪತ್ರಿಕೆ 'ವಿಜಯವಾಣಿ' ನೇತೃತ್ವದಲ್ಲಿ ನಗರದ ವಿನೋಬಾ ರಸ್ತೆಯ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 'ಎಜುಕೇಷನ್ ಎಕ್ಸ್‌ಪೋ-2025'ಗೆ ಶನಿವಾರ ಚಾಲನೆ ದೊರೆಯಿತು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಬಸವನಗೌಡಪ್ಪ ಮೇಳವನ್ನು ಉದ್ಘಾಟಿಸಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎಸ್.ಟಿ. ಜವರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶೈಕ್ಷಣಿಕ ಮೇಳಕ್ಕೆ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಮುಖ್ಯ ನೀಡಿದ್ದು, ಪ್ರಾಯೋಜಕತ್ವ ದಾವಣಗೆರೆಯ ಎಂವಿ ಪದವಿಪೂರ್ವ ಕಾಲೇಜು ಮತ್ತು ಬೆಂಗಳೂರಿನ ಸಪ್ತಗಿರಿ ಎನೋಟಿಕ್ ವಿಶ್ವವಿದ್ಯಾಲಯ ಸಹ ಪ್ರಾಯೋಜಕರಾಗಿದ್ದಾರೆ. ನಗರದ ಆ್ಯನಿ ಪ್ರೇಮ್ಸ್ ಕಾಲೇಜ್ ಆಫ್ ಆರ್ಟ್ಸ್ ಅನಿಮೇಷನ್ ಆ್ಯಂಡ್ ಮಲ್ಟಿಮೀಡಿಯಾ, ತುಮಕೂರಿನ ಶ್ರೀದೇವಿ ಎಜುಕೇಷನ್ ಮತ್ತು ನಗರದ ದಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ (ಎನ್.ಐಇ) ಕೋ ಸ್ಪಾನ್ಸರ್ ನೀಡಿವೆ.
ಇನ್ನೂ ಅದ್ದೂರಿಯಾಗಿ ನಡೆಯುತ್ತಿರುವ ಶೈಕ್ಷಣಿಕ ಉತ್ಸವವು ಈ ಎರಡು ದಿನವೂ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆ ಯವರೆಗೆ ತೆರೆದಿರಲಿದೆ. ಎಲ್ಲರಿಗೂ ಉಚಿತ ಪ್ರವೇಶ ಇದ್ದು, ಶಿಕ್ಷಣ ಸಂಸ್ಥೆಗಳ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ 40 ಮಳಿಗೆಗಳು ಇವೆ.