ಶಾಲೆಗಳಲ್ಲಿ ಫೆೇಸ್ ರೆಕಾಗ್ನೇಷನ್ ಹಾಜರಾತಿ ಸ್ಥಗಿತಕ್ಕೆ ಶಿಕ್ಷಣ ತಜ್ಞರ ಆಗ್ರಹ: ಕಾರಣವೇನು?

face reconice
Published on

ಬೆಂಗಳೂರು: ಮಕ್ಕಳ ದತ್ತಾಂಶವನ್ನು ಮಾರಾಟ ಮಾಡುವ ಅಥವಾ ದುರ್ಬಳಕೆಯಾಗುವ ಸಾಧ್ಯತೆಗಳಿರುವ ಕಾರಣ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಹಾಜರಾತಿಗೆ ಬಳಸುತ್ತಿರುವ ೇಸ್ ರೆಕಾಗ್ನಿನೇಷನ್ (ಎ್ಆರ್‌ಎಸ್) ಹಾಜರಾತಿ ವ್ಯವಸ್ಥೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಶಿಕ್ಷಣ ತಜ್ಞರು ಮತ್ತು ಪೋಷಕ ಸಂಘಟನೆಗಳು ಪತ್ರ ಬರೆದಿವೆ.

ಕೃತಕ ಬುದ್ಧಿಮತ್ತೆ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಸ್ಯಾಟ್ಸ್‌ನಲ್ಲಿ ಲಿಂಕ್ ಮಾಡಲಾಗಿದೆ. ನಿಯಮಿತವಾಗಿ ಗೈರು ಹಾಜರಿಯನ್ನು ಗುರುತಿಸುವುದು ಹಾಗೂ ಸರ್ಕಾರದ ಯೋಜನೆಗಳ ಲಾನುಭವಿಗಳನ್ನು ನಿಖರವಾತಿ ತಿಳಿಯುವುದು ಎ್ಆರ್‌ಎಸ್ ಉದ್ದೇಶವಾಗಿದೆ.

ಆದರೆ, ಹೀಗೆ ಸಂಗ್ರಹಿಸಿದ ದತ್ತಾಂಶವು ಅಪಾಯವನ್ನುಂಟುಮಾಡುವ ಸಾಧ್ಯತೆಗಳಿವೆ. ಇದಕ್ಕೆ ಡಿಜಿಟಲ್ ಸಾಕ್ಷ್ಯಗಳಿಂದ ಸಂಭವಿಸುತ್ತಿರುವ ಅನಾಹುಗಳೇ ಇದಕ್ಕೆ ಸಾಕ್ಷಿಯಾಗಿವೆ.

ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಮಾಹಿತಿಯು ಕಾಲೇಜುಗಳು ಮತ್ತು ಖಾಸಗಿ ಸಂಸ್ಥೆಗಳಿಗೆ ಲಭ್ಯವಾಗಲಿದೆ. ಅವರು ತಮ್ಮ ಕೋರ್ಸ್‌ಗಳನ್ನು ಮಾರಾಟ ಮಾಡಲು ಇದು ಸಹಾಯವಾಗಲಿದೆ. ಹಾಗೆಯೇ, ಮಕ್ಕಳ ಕಳ್ಳಸಾಗಣೆದಾರರು ಮತ್ತು ಇತರೆ ಅಪರಾಧಿಗಳ ಕೈಗೆ ತಲುಪಿದರೆ ಏನು ಗತಿ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ಸೆರೆಹಿಡಿಯುವ ಚಿತ್ರಗಳನ್ನು ಮಾರ್ಫಿಂಗ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಲು ಬಳಸಿದರೆ ಮಕ್ಕಳು ಮತ್ತು ಪಾಲಕರು ಅತಂತ್ರರಾಗಬೇಕಾಗುತ್ತದೆ. ಪಾಲಕರ ದುರ್ಬಲತೆ ಮತ್ತು ಹಾನಿಗೆ ಕಾರಣವಾಗಬಹುದು ಎಂಬ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಪತ್ರದಲ್ಲಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಅಖಿಲಭಾರತ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಗುರಿಕಾರ್, ಪಾಲಕ ಸಂಘಟನೆಯ ಬಿ.ಎನ್. ಯೋಗಾನಂದ ಸೇರಿ 31 ಮಂದಿ ಸಹಿ ಮಾಡಿ ಕಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net