ಡಿ.ಇಡಿ, ಡಿಪಿ.ಇಡಿಗೆ ಅರ್ಜಿ ಅಹ್ವಾನಿಸಿದ ಶಿಕ್ಷಣ ಇಲಾಖೆ

B.Ed Students Logo
Published on

ಬೆಂಗಳೂರು ಕೇಂದ್ರೀಕೃತ ದಾಖಲಾತಿ ಘಟಕವು 2024-25ನೇ ಸಾಲಿನ ಡಿ.ಇಡಿ, ಡಿ.ಪಿ.ಇಡಿ, ಡಿಪಿಎಸ್‌ಇ ಕೋರ್ಸ್‌ಗಳ ವ್ಯಾಸಂಗಕ್ಕಾಗಿ ಸರ್ಕಾರಿ ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನರಹಿತ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಅಭ್ಯರ್ಥಿಗಳು ಶಾಲಾ ಇಲಾಖೆಯ ವೆಬ್‌ಸೈಟ್‌ಗೆ https://schooleducation.karnataka.gov.in/

ಭೇಟಿ ನೀಡಿ ಅರ್ಜಿಗಳನ್ನು ಜೂ.5ರವರೆಗೆ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಮಾರ್ಗಸೂಚಿಯನ್ನು ಓದಿ ಅಥೈಸಿಕೊಂಡು ಅರ್ಜಿಯನ್ನು ಕ್ರಮಬದ್ಧವಾಗಿ ಭರ್ತಿ ಮಾಡಿ ಒಂದು ಪ್ರತಿಯನ್ನು ವ್ಯವಸ್ಥಾಪಕ ಕೇಂದ್ರಗಳಿಗೆ(ಡಯಟ್) ಸಲ್ಲಿಸುವಂತೆ ಘಟಕವು ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net