

ನಮ್ಮ ಕುಟುಂಬ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣ
Colonel Sofiya Qureshi mother reaction : ಭಾರತವು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಸಾಧನೆಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂತು. ಇತ್ತೀಚೆಗೆ, ಆಕೆಯ ಕುಟುಂಬ ಸದಸ್ಯರು ಆಪರೇಷನ್ ಸಿಂಧೂರ್ಗೆ ಪ್ರತಿಕ್ರಿಯಿಸಿದರು.
ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ಈ ಕಾರ್ಯಾಚರಣೆಯು ನ್ಯಾಯ ಒದಗಿಸಿದ ಕರ್ನಲ್ ಖುರೇಷಿ ಅವರ ತಾಯಿ ಹಲೀಮಾ ಖುರೇಷಿ ಮಾತನಾಡಿ, ನಮ್ಮ ಸಹೋದರಿಯರು ಮತ್ತು ತಾಯಂದಿರ ಸಿಂಧೂರಕ್ಕೆ ನಾವು ಸೇಡು ತೀರಿಸಿಕೊಂಡಿದ್ದೇವೆ. ಇದು ನಮ್ಮ ಕುಟುಂಬ ಮತ್ತು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ತನ್ನ ತಂದೆ ಮತ್ತು ಅಜ್ಜನಿಂದ ಸ್ಫೂರ್ತಿ ಪಡೆದು, ಸೋಫಿಯಾ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಬಹಳ ದಿನಗಳಿಂದ ಬಯಸಿದ್ದರು ಎಂದು ಅವರು ನೆನಪಿಸಿಕೊಂಡರು.
"ನಮ್ಮ ಮಗಳು ದೇಶಕ್ಕಾಗಿ ಮಾಡಿರುವ ಕೆಲಸದಿಂದ ನಮಗೆ ತುಂಬಾ ಸಂತೋಷವಾಗಿದೆ. ಇದು ಇತರರಿಗೆ ತಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಪ್ರೇರಣೆ ನೀಡುತ್ತದೆ, ಇದರಿಂದ ಅವರು ದೇಶಕ್ಕೆ ಸೇವೆ ಸಲ್ಲಿಸಬಹುದು" ಎಂದು ಅವರ ತಾಯಿ ಹಲೀಮಾ ಖುರೇಷಿ ಹೇಳಿದರು.
"ಅವಳು ಚಿಕ್ಕವಳಿದ್ದಾಗ, ದೊಡ್ಡವಳಾದ ಮೇಲೆ ಸೈನ್ಯಕ್ಕೆ ಸೇರುತ್ತೇನೆ ಎಂದು ಹೇಳುತ್ತಿದ್ದಳು. ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಮಗಳು ನಮ್ಮ ದೇಶಕ್ಕಾಗಿ ಉತ್ತಮ ಕೆಲಸ ಮಾಡಿದ್ದಾಳೆ. ಪಾಕಿಸ್ತಾನ ನಾಶವಾಗಬೇಕು. ನನ್ನ ಅಜ್ಜ, ನನ್ನ ತಂದೆ ಮತ್ತು ನಾನು ಎಲ್ಲರೂ ಸೈನ್ಯದಲ್ಲಿದ್ದೆವು, ಮತ್ತು ಈಗ ಅವಳು ಕೂಡ ಅದೇ ಹಾದಿಯಲ್ಲಿದ್ದಾಳೆ ಎಂದು ಕರ್ನಲ್ ಖುರೇಷಿ ಅವರ ತಂದೆ ತಾಜ್ ಮೊಹಮ್ಮದ್ ಖುರೇಷಿ ಹೇಳಿದರು.
ಅವರ ಸಹೋದರ ಮೊಹಮ್ಮದ್ ಸಂಜಯ್ ಖುರೇಷಿ ಕೂಡ ಇದೇ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದು, ದೇಶವು ಈ ಕ್ಷಣಕ್ಕಾಗಿ ಬಹಳ ಸಮಯದಿಂದ ಕಾಯುತ್ತಿದೆ. ಈ ರೀತಿಯ ಪ್ರತಿಕ್ರಿಯೆಗಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ನಮ್ಮ ಕುಟುಂಬದ ಸದಸ್ಯರೊಬ್ಬರು ಇಂತಹ ಮಹತ್ವದ ಕಾರ್ಯಾಚರಣೆಯ ಬಗ್ಗೆ ರಾಷ್ಟ್ರಕ್ಕೆ ವಿವರಿಸುತ್ತಾರೆಂದು ನಾವು ಎಂದಿಗೂ ಊಹಿಸಿರಲಿಲ್ಲ. ಇದು ನಮಗೆ ಹೆಮ್ಮೆಯ ಕ್ಷಣ" ಎಂದು ಅವರು ಹೇಳಿದರು.
ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ (ಪಿಒಕೆ) ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡ ಆಪರೇಷನ್ ಸಿಂಧೂರ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಬುಧವಾರ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.