ಆಪರೇಷನ್ ಸಿಂಧೂರ: ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ…Sofiya Qureshi

Sofiya Qureshi

Sofiya Qureshi : ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡಲು ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ್’  ಭಾರತೀಯ ದಾಳಿಯಲ್ಲಿ ಸುಮಾರು 100 ಕ್ಕೂ ಹೆಚ್ಚು ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

blank

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು ಆಪರೇಷನ್ ಸಿಂಧೂರ್ ಮೂಲಕ ಸೂಕ್ತ ಪ್ರತ್ಯುತ್ತರ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ 9 ಭಯೋತ್ಪಾದಕ ಅಡಗುತಾಣಗಳ ಮೇಲೆ ನಡೆದಿದೆ.  ದೇಶದ ಇಬ್ಬರು ಮಹಿಳಾ ಮಿಲಿಟರಿ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಕಾಣಿಸಿಕೊಂಡರು.

ಕರ್ನಲ್ ಸೋಫಿಯಾ ಖುರೇಷಿ:

ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯ ಆಪರೇಷನ್ ಸಿಂದೂರ ಹೆಸರಿನ ಏರಸ್ಟ್ರೈಕ್ ಯಶಸ್ವಿ ಕಾರ್ಯಾಚರಣೆ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಬೆಳಗಾವಿಯರು.

ಸೋಫೀಯಾ ಪತಿ ತಾಜುದ್ದೀನ್ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು. ಪತಿ, ಪತ್ನಿ‌ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೋಫಿಯಾ ಖುರೇಷಿ ಅವರ ಪತಿ ತಾಜುದ್ದೀನ್ ಬಾಗೇವಾಡಿ ಸಹ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2015 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾಜುದ್ದೀನ್ ಸೋಫಿಯಾ ಅವರದ್ದು ಪ್ರೇಮ ವಿವಾಹ. ಕರ್ನಲ್ ಸೋಫಿಯಾ ಮೂಲತಃ ಗುಜರಾತ್ ರಾಜ್ಯದ ಬರೋಡಾ ನಿವಾಸಿಯಾಗಿದ್ದಾರೆ.  ಸೋಫಿಯಾ ಖುರೇಷಿ ಜಮ್ಮುವಿನಲ್ಲಿ ಕರ್ನಲ್ ಆಗಿ, ಪತಿ ತಾಜುದ್ದೀನಿ ಬಾಗೇವಾಡಿ ಸಹ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗುಜರಾತ್ ಮೂಲದ 35 ವರ್ಷದ ಕರ್ನಲ್ ಸೋಫಿಯಾ ಖುರೇಷಿ, ಭಾರತೀಯ ಸೇನೆಯ ಸಿಗ್ನಲ್ ಕಾರ್ಪ್ಸ್‌ನಲ್ಲಿ ಅಧಿಕಾರಿಯಾಗಿದ್ದಾರೆ. 1999 ರಲ್ಲಿ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ನಿಯೋಜನೆಗೊಂಡ ನಂತರ, ಅವರು ದಂಗೆ ನಿಗ್ರಹ ಕಾರ್ಯಾಚರಣೆಗಳು ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸೋಫಿಯಾ ಅವರ ಮಿಲಿಟರಿಯೊಂದಿಗಿನ ಸಂಬಂಧವು ತಲೆಮಾರುಗಳಷ್ಟು ಹಳೆಯದು. ಅವರ ಅಜ್ಜ ಮತ್ತು ತಂದೆ ಇಬ್ಬರೂ ಸೈನ್ಯದಲ್ಲಿದ್ದರು. 2006 ರಲ್ಲಿ, ಅವರನ್ನು ಕಾಂಗೋದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಡಿಯಲ್ಲಿ ನಿಯೋಜಿಸಲಾಯಿತು.

2016 ರಲ್ಲಿ, ಆಗ ಲೆಫ್ಟಿನೆಂಟ್ ಕರ್ನಲ್ ಆಗಿ ನೇಮಕಗೊಂಡಿದ್ದ ಸೋಫಿಯಾ ಖುರೇಷಿ, ವ್ಯಾಯಾಮ ಪಡೆ 18 ರಲ್ಲಿ ಭಾರತದ 40 ಸದಸ್ಯರ ಮಿಲಿಟರಿ ತುಕಡಿಯನ್ನು ಮುನ್ನಡೆಸಿದರು. ಯಾವುದೇ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಸಮರಾಭ್ಯಾಸ ಭಾರತದ ಅತಿದೊಡ್ಡ ಬಹುರಾಷ್ಟ್ರೀಯ ಸೇನಾ ಸಮರಾಭ್ಯಾಸ ಮಾತ್ರವಲ್ಲದೆ, 18 ದೇಶಗಳ ಸೇನೆಗಳು ಇದರಲ್ಲಿ ಭಾಗವಹಿಸಿದ್ದವು. ಆಸಿಯಾನ್ ರಾಷ್ಟ್ರಗಳಲ್ಲದೆ, ಈ ದೇಶಗಳಲ್ಲಿ ಜಪಾನ್, ಅಮೆರಿಕ, ಚೀನಾ, ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೈತ್ಯ ರಾಷ್ಟ್ರಗಳು ಸೇರಿವೆ.

ಮಗಳ ಕುರಿತು ಹೆಮ್ಮೆ ವ್ಯಕ್ತಪಡಿಸಿದ ಸೋಫಿಯಾ ಖುರೇಷಿ ತಂದೆ ತಾಜುದ್ದೀನ್ ಮೊಹಮ್ಮದ್ ಖುರೇಷಿ, ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ್ದಾರೆ. ನನಗೆ ವಯಸ್ಸಾಗಿದೆ. ಈಗ ಹೆಚ್ಚು ನಡೆದಾಡಲು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ವಿಚಾರದಲ್ಲಿ ನನಗೆ ಅವಕಾಶ ಸಿಕ್ಕಿದರೆ, ಪಾಕಿಸ್ತಾನವನ್ನು ಈ ಭೂಪಟದಿಂದ ಅಳಿಸಿ ಬಿಡುತ್ತೇನೆ ಎಂದಿದ್ದಾರೆ.

ಆಪರೇಷನ್ ಸಿಂಧೂರ್‌ಗೆ ಶಕ್ತಿ ತುಂಬುತ್ತಿರುವ ಭಾರತೀಯ ಅಧಿಕಾರಿಗಳಾದ ಸೋಫಿಯಾ ಖುರೇಷಿ ಮತ್ತು ವ್ಯೋಮಿಕಾ ಸಿಂಗ್ ಯಾರು? Sofiya Qureshi, Vyomika Singh

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…