_1788112813098.webp?w=480&auto=format%2Ccompress&fit=max)
_1788112813098.webp?w=480&auto=format%2Ccompress&fit=max)
ದಿನಬಳಕೆಯ ಹಾಗೂ ಜೀವನಾವಶ್ಯಕ ವಸ್ತುಗಳ ನಿರಂತರ ಬೆಲೆ ಏರಿಕೆಯು ಜನಸಾಮಾನ್ಯರ, ಅದರಲ್ಲೂ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕನ್ನು ಅರಶ@ ಹೈರಾಣಾಗಿಸಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಅಗತ್ಯ ಸಾಮಗ್ರಿಗಳ ದರಗಳು ಸಾಮಾನ್ಯ ಕುಟುಂಬಗಳ ಮಾಸಿಕ ಬಜೆಟ್ ಅನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿವೆ. ಸಕ್ಕರೆಯ ಬೆಲೆ ದಿನದಿಂದ ದಿನಕ್ಕೆ ಏರುಮುಖವಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 65-70 ರೂಪಾಯಿಗಳ ಗಡಿ ದಾಟಿದೆ. ಬೆಳಗಿನ ಚಹಾದಿಂದ ದಿನ ಆರಂಭಿಸುವ ಜನಸಾಮಾನ್ಯರಿಂದ ಹಿಡಿದು ಹೋಟೆಲ್, ಆತಿಥ್ಯ ರಂಗದವರಿಗೆ ಈ ಬೆಲೆಯೇರಿಕೆ ಹೈರಾಣಾಗಿಸಿದೆ. ಇದರ ಬೆನ್ನಲ್ಲೇ ಅಡುಗೆ ಮನೆಯ ಪ್ರಮುಖ ಸಾಮಗ್ರಿಯಾದ ಈರುಳ್ಳಿಯ ದರವೂ ಹೆಚ್ಚಳಗೊಂಡಿದೆ. ಇನ್ನು ಎಲ್ಲ ವರ್ಗದ ಜನರಿಗೂ ನಿತ್ಯದ ಆಹಾರವಾಗಿರುವ ಅಕ್ಕಿ ಬೆಲೆಯಂತೂ ಕಳೆದ ಮೂರು ತಿಂಗಳುಗಳಿಂದ ನಿಯಂತ್ರಣವಿಲ್ಲದೆ ಹೆಚ್ಚುತ್ತಲೇ ಇದೆ. ದಿನಸಿ, ತರಕಾರಿ ಹಾಗೂ ಇಂಧನ ಸೇರಿದಂತೆ ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಾಗುತ್ತಿರುವುದರಿಂದ, ದುಡಿಮೆಯ ಬಹುಪಾಲು ಹಣ ನಿತ್ಯದ ಊಟ-ತಿಂಡಿಗೇ ವ್ಯಯವಾಗುವಂತಾಗಿದೆ. ಬೆಲೆಯೇರಿಕೆಯ ಸಮಸ್ಯೆ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಲೆಯೇರಿಕೆಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದ್ಯತೆಯಾಗಲಿ.