ED: ಚೀನಾ ಲಿಂಕ್​ ಹೊಂದಿದ ಲೋನ್ ಆ್ಯಪ್ ಕಂಪನಿಗೆ ಭಾರಿ ದಂಡ!

Loan App
Published on

ಹೈದರಾಬಾದ್: ಚೀನಾ ಮತ್ತು ನಾರ್ವೇ ಸಂಸ್ಥೆಗಳಿಗೆ ಲಿಂಕ್ ಮಾಡಲಾಗಿದೆ ಎಂದು ಹೇಳಲಾದ ಸಾಲದ ಅಪ್ಲಿಕೇಶನ್ ಅನ್ನು ನಡೆಸುತ್ತಿರುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾದ ಪಿಸಿ ಫೈನಾನ್ಷಿಯಲ್ ಸರ್ವಿಸಸ್ (ಪಿಸಿಎಫ್‌ಎಸ್) ಮೇಲೆ ಫೆಮಾ ಉಲ್ಲಂಘನೆಗಳಿಗಾಗಿ ಇಡಿ(ED) 2,146 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.

ನಾರ್ವೆ ಮೂಲದ ಒಪೇರಾ ಗ್ರೂಪ್‌ನ ಅಂಗಸಂಸ್ಥೆಯಾದ ಪಿಸಿಎಫ್​ಎಸ್​ ನಲ್ಲಿ ಫಲಾನುಭವಿಗಳಾಗಿ ಚೀನೀ ಪ್ರಜೆಗಳನ್ನು ಹೊಂದಿರುವುದು ಕಂಡುಬಂದಿದೆ. ಕಂಪನಿಯು ತನ್ನ ಅಪ್ಲಿಕೇಶನ್ ಕ್ಯಾಶ್‌ಬೀನ್ ಮೂಲಕ ಕಾನೂನುಬಾಹಿರವಾಗಿ ಸಾಲ ನೀಡುತ್ತಿತ್ತು. ಸಾಲಗಾರರಿಗೆ ಅತಿಹೆಚ್ಚು ಬಡ್ಡಿದರಗಳನ್ನು ವಿಧಿಸುತ್ತಿತ್ತು.

ಚೀನಾದ ಮಾಲೀಕರ ನಿಯಂತ್ರಣದಲ್ಲಿರುವ ಕಂಪನಿಯ ಮೇಲೆ ಇಡಿಯ ಹೈದರಾಬಾದ್ ಘಟಕ ನಡೆಸಿದ ತನಿಖೆಯಲ್ಲಿ, ಪಿಸಿಎಫ್‌ಎಸ್ ಸಾಫ್ಟ್‌ವೇರ್ ಪರವಾನಗಿಗಳು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳುವ ನೆಪದಲ್ಲಿ ಸಂಬಂಧಿತ ಸಾಗರೋತ್ತರ ಸಮೂಹ ಕಂಪನಿಗಳಿಗೆ 429 ಕೋಟಿ ರೂಪಾಯಿಗಳ ಮೋಸದ ಹಣ ರವಾನೆ ಮಾಡಿರುವುದು ಕಂಡುಬಂದಿದೆ.

ಭಾರತದಲ್ಲಿನ 252 ಕೋಟಿ ರೂಪಾಯಿ ಮೌಲ್ಯದ ಪಿಸಿಎಫ್​ಎಸ್​ ನ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇಡಿಯ ತೀರ್ಪು ನೀಡುವ ಪ್ರಾಧಿಕಾರವು ಅ.7ರಂದು ಆದೇಶಿತ್ತು. ಇಡಿ ಈ ಹಿಂದೆ ಕಂಪನಿಯ ಚರ ಮತ್ತು ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿತ್ತು.

ದೇಶದಲ್ಲಿ ಲೋನ್​ ಆ್ಯಪ್​ ಕಂಪನಿಗೆ ಇಷ್ಟು ದೊಡ್ಡ ಮಟ್ಟದ ದಂಡವನ್ನು ಲೋನ್ ಆ್ಯಪ್ ಕಂಪನಿಗೆ ವಿಧಿಸುತ್ತಿರುವುದು ಇದು ಮೊದಲನೆಯದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net