ಜೈಪುರ: ಜಾತಿ ಆಧಾರಿತ ತಾರತಮ್ಯವನ್ನು ಕೊನೆಗೊಳಿಸುವಂತೆ ಆರ್‌ಎಸ್‌ಎಸ್(RSS) ಮುಖಂಡ ಸುರೇಶ್ ಭಯ್ಯಾಜಿ ಜನರಿಗೆ ಮನವಿ ಮಾಡಿದರು.
ಇದನ್ನೂ ಓದಿ: Casting Couch : ಹರಿಯಾಣದಲ್ಲಿ ತನ್ನ ಗೆಳತಿಗೆ ಟಿಕೆಟ್ ಕೊಡಿಸಲು ಕೆಸಿ ವೇಣುಗೋಪಾಲ್ ..!
ನಮ್ಮ 12 ಜ್ಯೋತಿರ್ಲಿಂಗಗಳು ಯಾವುದಾದರೂ ಜಾತಿಗೆ ಸೇರಿವೆಯೇ? ಇಲ್ಲದಿದ್ದರೆ ತಾರತಮ್ಯ ಏಕೆ? ಈ ಕುರಿತು ಅನಗತ್ಯ ಗೊಂದಲ ಮೂಡಿದರೆ ಅದನ್ನು ಹೋಗಲಾಡಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.
ಜಾತಿ ತಾರತಮ್ಯ ತೊಲಗಿ ಸಮಾಜವಾಗಿ ಎಲ್ಲರೂ ಒಂದಾಗಬೇಕು. ಹುಟ್ಟಿನಿಂದಲೇ ಜಾತಿ ನಿರ್ಧಾರವಾಗುತ್ತದೆ. ಇದೊಂದು ಸಾಮಾಜಿಕ ಪಿಡುಗು. ಇದು ಕೊನೆಗೊಳ್ಳಬೇಕಾಗಿದೆ. ಎಲ್ಲಿ ತಾರತಮ್ಯವಿರುವುದಿಲ್ಲವೋ ಆ ಸಮಾಜವು ಉತ್ತಮ ಸಮಾಜವಾಗಿ ನಿಲ್ಲುತ್ತದೆ. ಸಮಾಜದ ಎಲ್ಲಾ ಭಾಗಗಳು ಮುಖ್ಯ. ಯಾರೂ ಕೀಳಲ್ಲ ಎಂದು ಭಯ್ಯಾಜಿ ಹೇಳಿದರು.
ರಾಜ್ಯದ ಗಡಿಗಳು ಹೇಗೆ ನಮ್ಮೊಳಗೆ ತಾರತಮ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲವೋ ಹಾಗೆಯೇ ಜನ್ಮದ ಆಧಾರದ ಮೇಲೆ ಪಡೆದ ಸ್ಥಾನಮಾನವು ನಮ್ಮೊಳಗೆ ತಾರತಮ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ. ತಪ್ಪು ಕಲ್ಪನೆ ಕೊನೆಗಾಣಬೇಕು. ಯಾವುದೇ ಗೊಂದಲವಿದ್ದರೆ ಅದನ್ನು ತೆಗೆದುಹಾಕಬೇಕು. ಅನಾವಶ್ಯಕ ಅಹಂಕಾರ ವಿಜೃಂಭಿಸಿದಾಗ ಅದನ್ನು ನಿಗ್ರಹಿಸಬೇಕಾಗುತ್ತದೆ ಎಂದರು.
Forbes List : ಭಾರತದ ನಂ.1 ಶ್ರೀಮಂತ ಮುಖೇಶ್ ಅಂಬಾನಿ..2ನೇ ಸ್ಥಾನದಲ್ಲಿ ಗೌತಮ್ ಅದಾನಿ- ರತನ್ ಟಾಟಾ ಹೆಸರಿಲ್ಲ!