ಪಿಎಂಎಲ್​ಎ ಅಡಿ ಇಬ್ಬರು ಸಿಎಂಗಳನ್ನ ಬಂಧಿಸಿದ್ದ ಇಡಿ ಅಧಿಕಾರಿ ರಾಜೀನಾಮೆ| Kapil Raj

ED-Kapil Raj
Published on

Kapil Raj:  ಅಕ್ರಮ ಹಣ ವರ್ಗಾವಣೆ ಕೇಸ್​ನಲ್ಲಿ ಇಬ್ಬರು ಮುಖ್ಯಮಂತ್ರಿಗಳನ್ನ ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಕಪಿಲ್​ ರಾಜ್ ತಮ್ಮ 16 ವರ್ಷಗಳ ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

45 ವರ್ಷದ ಕಪಿಲ್ ರಾಜ್ 2009ರ ಬ್ಯಾಚ್​ನ ಐಆರ್​ಎಸ್​ ಅಧಿಕಾರಿಯಾಗಿದ್ದರು. ತಮ್ಮ 16 ವರ್ಷಗಳ ಸೇವೆಯಲ್ಲಿ 8 ವರ್ಷಗಳ ಜಾರಿ ನಿರ್ದೇಶನಾಲಯದಲ್ಲಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಕಪಿಲ್ ರಾಜ್ ಅವರು ದೆಹಲಿ ಜಿಎಸ್​ಟಿಯ ಗುಪ್ತಚರ ವಿಭಾಗದ ಆಯುಕ್ತರಾಗಿ ಕೆಲಸ ಮಾಡ್ತಿದ್ದರು.

ವೈಯಕ್ತಿಕ ಕಾರಣ ನೀಡಿ ಇನ್ನೂ 15 ವರ್ಷ ಸೇವೆ ಇರುವಾಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಹಣಕಾಸು ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಜುಲೈ 17ರಂದೇ ಜಾರಿಗೆ ಬರುವಂತೆ ರಾಷ್ಟ್ರಪತಿಗಳು ರಾಜೀನಾಮೆಯನ್ನ ಅಂಗೀಕರಿಸಿದ್ದಾರೆ.

ದೆಹಲಿ ಸಿಎಂ ಆಗಿದ್ದ ಅರವಿಂದ್ ಕೇಜ್ರಿವಾಲ್, ಜಾರ್ಖಂಡ್ ಸಿಎಂ ಹೇಮಂತ್​ ಸೊರೆನ್ ಅವರನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ(ಪಿಎಂಎಲ್​ಎ) ಅಡಿ  ಬಂಧಿಸಿದ್ದ 8 ಮುಖ್ಯ ಇಡಿ ಅಧಿಕಾರಿಗಳಲ್ಲಿ ಕಪಿಲ್ ರಾಜ್ ಸಹ ಒಬ್ಬರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net