'ರಾಜಕೀಯ ತೊರೆಯಲು ನಿರ್ಧರಿಸಿದ್ದೇನೆ'; ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದ ಎಎಪಿ ನಾಯಕಿ| Anmol Gagan Maan

Anmol Gagan Maan
Published on: 

ಅಮೃತಸರ; ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕಿ, ಗಾಯಕಿ ಮತ್ತು ರಾಜಕಾರಣಿ ಅನ್ಮೋಲ್ ಗಗನ್ ಮಾನ್ ಪಂಜಾಬ್ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜಕೀಯವನ್ನು ಸಂಪೂರ್ಣವಾಗಿ ತ್ಯಜಿಸುವುದಾಗಿ ಹೇಳಿಕೆ ನೀಡಿದ್ದಾರೆ.

ರಾಜಕೀಯ ಪ್ರವೇಶಿಸುವ ಮೊದಲು, ಮಾನ್ ಜನಪ್ರಿಯ ಪಂಜಾಬಿ ಗಾಯಕಿಯಾಗಿದ್ದರು. ಅವರು ಸೂಟ್, ಗೈಂಟ್ ಪರ್ಪಸ್ ಮತ್ತು ಶೇರ್ನಿ ನಂತಹ ಹಾಡುಗಳಿಗೆ ಹೆಸರುವಾಸಿಯಾಗಿದ್ದರು. ಖರಾರ್ ಕ್ಷೇತ್ರದ ಶಾಸಕಿ ಪಂಜಾಬ್ ವಿಧಾನಸಭಾ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ನನ್ನ ಹೃದಯ ತುಂಬಾ ಭಾರವಾಗಿದೆ, ಹಾಗಾಗಿ ನಾನು ರಾಜಕೀಯ ಬಿಡಲು ನಿರ್ಧರಿಸಿದ್ದೇನೆ. ಪಕ್ಷಕ್ಕೆ ನನ್ನ ಶುಭಾಶಯಗಳು, ಪಂಜಾಬ್ ಸರ್ಕಾರ ಜನರ ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತದೆ ಎಂದು ನಾನು ಭಾವಿಸುತ್ತೇನೆ. ಸ್ಪೀಕರ್‌ ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು ಎಂದು ಗಗನ್ ಮಾನ್ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

(ಏಜೆನ್ಸೀಸ್)

ಗಗನ್ ಮಾನ್ ಅವರು 2022 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಖರಾರ್‌ನಿಂದ ಆಯ್ಕೆಯಾದರು ಮತ್ತು ಭಗವಂತ್ ಮಾನ್ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. ಕಳೆದ ವರ್ಷ ನಡೆದ ಸಂಪುಟ ಪುನರ್​ರಚನೆಯಲ್ಲಿ ಅವರಿಗೆ ಪ್ರವಾಸೋದ್ಯಮ ಮತ್ತು ಸಂಸ್ಕೃತಿ, ಹೂಡಿಕೆ ಪ್ರಚಾರ, ಕಾರ್ಮಿಕ ಮತ್ತು ಆತಿಥ್ಯ ಸೇರಿದಂತೆ ಪ್ರಮುಖ ಖಾತೆಗಳನ್ನು ನೀಡಲಾಗಿತ್ತು.