ಪರಿಶಿಷ್ಟರಿಗೆ ಮೀಸಲಾಗಿದ್ದ ಭೂಮಿ ಕಬಳಿಸಿದೆಯೇ ಗಾಂಧಿ ಪರಿವಾರ?

19_sonia_rahul
Published on

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯ ಮುಂಬೈನಲ್ಲಿ ಗಾಂಧಿ ಪರಿವಾರಕ್ಕೆ ಸೇರಿದ್ದೆನ್ನಲಾದ ಅಂದಾಜು ಒಂದು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ.

ಈ ಭೂಮಿಯನ್ನು ಗಾಂಧಿ ಕುಟುಂಬದವರು ತಮ್ಮದೇ ಕುಟುಂಬದ ಒಡೆತನದಲ್ಲಿರುವ ಅಸೋಸಿಯೇಟೆಡ್​ ಜರ್ನಲ್​ ಲಿಮಿಟೆಡ್​ ಸಂಸ್ಥೆಯಿಂದ ಪಡೆದುಕೊಂಡಿದ್ದರು ಎಂದು ಹೇಳಲಾಗಿದೆ.

ಇನ್ನೊಂದು ರೋಚಕ ವಿಷಯವೆಂದರೆ, ಹೀಗೆ ಪರಭಾರೆ ಮಾಡಿಕೊಂಡ ಭೂಮಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಹಾಸ್ಟೆಲ್​ ನಿರ್ಮಾಣಕ್ಕೆ ಮೀಸಲಾಗಿತ್ತು ಎನ್ನಲಾಗಿದೆ. ಇದ್ಯಾವುದು ಕಾಂಗ್ರೆಸ್​ಗೆ ತಿಳಿದಿರಲಿಲ್ಲವೇ ಎಂಬ ಪ್ರಶ್ನೆಗಳೆದ್ದಿವೆ.

ಒಟ್ಟು 3,478 ಚದರ ಮೀಟರ್​ (37,436 ಚದರಡಿ) ಅಂದರೆ ಅಂದಾಜು ಎಕರೆ ಭೂಮಿ ಇದಾಗಿದೆ. ಈ ಪ್ರಕರಣದಲ್ಲಿ ಹಲವು ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ಆರೋಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net