ಇನ್​ಸ್ಟಾಗ್ರಾಮ್ ಪೋಸ್ಟ್ ನೋಡಿ ಬಂದು ಯುವತಿಯ ಕಥೆ ಮುಗಿಸಿದ್ರು; ಹಗಲು ಹೊತ್ತಿನಲ್ಲಿ ಬರ್ಬರವಾಗಿ ಹತ್ಯೆಗೈದು ಆರೋಪಿಗಳು ಎಸ್ಕೇಪ್

Ecuadorian beauty queen shot dead Instagram post gave away location to killers
Published on

ನವದೆಹಲಿ: ರೆಸ್ಟೋರೆಂಟ್​​​ನಲ್ಲಿದ್ದೇನೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿ ಯುವತಿ ಸಾವಿನ ಕದ ತಟ್ಟಿದ್ದಾಳೆ. ದುಷ್ಕರ್ಮಿಗಳು ಆಕೆಯನ್ನು ಹುಡುಕಿಕೊಂಡು ರೆಸ್ಟೋರೆಂಟ್​​ಗೆ ಬಂದು ಗುಂಡಿಕ್ಕಿ ಕೊಂದಿರುವ ಘಟನೆ ಈಕ್ವೆಡಾರ್‌ನಲ್ಲಿ ನಡೆದಿದೆ.

ಈಕ್ವೆಡಾರ್ ಸೌಂದರ್ಯ ರಾಣಿ ಲ್ಯಾಂಡಿ ಪರಗಾ ಗೊಯ್ಬುರೊ (23) ಮೃತ ಯುವತಿ. ಈ ಹಿಂದೆ ತಾನು ರೆಸ್ಟೋರೆಂಟ್‌ನಲ್ಲಿದ್ದೇನೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಳು. ಇದರ ಆಧಾರದ ಮೇಲೆ ಪುಂಡರು ಅಲ್ಲಿಗೆ ಬಂದು ಈ ದಾಳಿ ನಡೆಸಿದ್ದಾರೆ. ರೆಸ್ಟೊರೆಂಟ್‌ನಲ್ಲಿ ಹಗಲು ಹೊತ್ತಿನಲ್ಲಿ ಎಲ್ಲರೂ ನೋಡುತ್ತಿರುವಾಗಲೇ ಸಮೀಪದಿಂದ ಗುಂಡೇಟಿನಿಂದ ಬರ್ಬರವಾಗಿ ಕೊಂದರು.

ಗೊಯ್ಬುರೊ ರೆಸ್ಟೋರೆಂಟ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ಬಂದಿದ್ದಾರೆ. ಇದೇ ವೇಳೆ ಬಂದೂಕುಧಾರಿಯೊಬ್ಬ ಗೊಯ್ಬುರೊ ಮತ್ತು ಆಕೆ ಜತೆ ಮಾತನಾಡುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ಗಾಯಗಳಿಂದ ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಆಕೆಯ ಹತ್ಯೆಗೆ ಕಾರಣಗಳು ಬಹಿರಂಗವಾಗಿಲ್ಲ. ಹಂತಕರನ್ನು ಹಿಡಿಯಲು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

2022 ರ ಮಿಸ್ ಈಕ್ವೆಡಾರ್ ಸ್ಪರ್ಧೆಯಲ್ಲಿ ಲಾಸ್ ರಿಯೊಸ್ ಪ್ರಾಂತ್ಯವನ್ನು ಲ್ಯಾಂಡಿ ಪರಾಗಾ ಗೊಯ್ಬುರೊ ಪ್ರತಿನಿಧಿಸಿದರು. ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net