ನಿರೀಕ್ಷೆಗಿಂತ ವೇಗವಾಗಿ ಆರ್ಥಿಕತೆ ಚೇತರಿಕೆ

Prakash_Javadekar
Published on

ನವದೆಹಲಿ: ದೇಶದ ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಹಳಿಗೆ ಮರಳುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಹೇಳಿದ್ದಾರೆ.

ಇಂಧನಕ್ಕೆ ಹೆಚ್ಚುತ್ತಿರುವ ಬೇಡಿಕೆ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ ಮೊದಲಾದ ಅಂಶಗಳು ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿರುವ ಸಂಕೇತವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ (ಎಫ್​ಡಿಐ) ಹೆಚ್ಚಳವೂ ಆರ್ಥಿಕ ಚೇತರಿಕೆಯ ಚಿಹ್ನೆಯಾಗಿದೆ ಎಂದಿದ್ದಾರೆ. ಉತ್ತಮ ಮಳೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಇಂಧನ ಬಳಕೆ ಕಡಿಮೆಯಾಗಿದ್ದರೂ, ರೈಲ್ವೆ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸದಿದ್ದರೂ ಇಂಧನ ಬೇಡಿಕೆ ಹೆಚ್ಚಿದೆ.

ಇಂಧನ ಬೇಡಿಕೆ ಶೇ. 12 ಏರಿಕೆಯಾಗಿರುವುದು ಉತ್ಪಾದನಾ ಕ್ಷೇತ್ರ ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿರುವುದರ ಸೂಚನೆಯಾಗಿದೆ. ದೇಶದ ಆರ್ಥಿಕತೆ ವೇಗವಾಗಿ ಸುಧಾರಿಸುತ್ತಿದ್ದು ಶೀಘ್ರವೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದೆ ಎಂದು ಹಣಕಾಸು ಕಾರ್ಯದರ್ಶಿ ತರುಣ್ ಬವೇಜಾ ಕೂಡ ಮಂಗಳವಾರ ಆಶಾವಾದ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net