ಗ್ರಾಮಾಭಿವೃದ್ಧಿ ಯೋಜನೆಯಡಿ ಆರ್ಥಿಕ ಸ್ವಾವಲಂಬನೆ

 ಹನಗೋಡು ಹೋಬಳಿಯ ನೇರಳಕುಪ್ಪೆ ಹಾಡಿಯಲ್ಲಿ ನೂತನವಾಗಿ ರಚನೆಗೊಂಡ ಚಾಮುಂಡೇಶ್ವರಿ ಮಹಿಳಾ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ನೆರಳುಕುಪ್ಪೆ ಮಾದೇವ್, ಪುಷ್ಪಲತಾ, ಮಮತಾ, ಮಂಜುಳಾ ಇದ್ದಾರೆ.
ಹನಗೋಡು ಹೋಬಳಿಯ ನೇರಳಕುಪ್ಪೆ ಹಾಡಿಯಲ್ಲಿ ನೂತನವಾಗಿ ರಚನೆಗೊಂಡ ಚಾಮುಂಡೇಶ್ವರಿ ಮಹಿಳಾ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಲಾಯಿತು. ನೆರಳುಕುಪ್ಪೆ ಮಾದೇವ್, ಪುಷ್ಪಲತಾ, ಮಮತಾ, ಮಂಜುಳಾ ಇದ್ದಾರೆ.
Published on

ಹನಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ನೆರವಾಗಿದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ನೇರಳಕುಪ್ಪೆ ಮಹದೇವ್ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನಗೋಡು ವಲಯದ ನೇರಳಕುಪ್ಪೆ ಗ್ರಾಮದಲ್ಲಿ ಮಂಗಳವಾರ ಆದಿವಾಸಿ ಮಹಿಳೆಯರು ರಚಿಸಿಕೊಂಡಿರುವ ಚಾಮುಂಡೇಶ್ವರಿ ಮಹಿಳಾ ಸ್ವ-ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಬಡ ಮಹಿಳೆಯರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ವಸಹಾಯ ಸಂಘಗಳ ಮೂಲಕ ಹೆಚ್ಚಿನ ದಾಖಲೆ ಒದಗಿಸುವ ಜಂಜಡವಿಲ್ಲದೆ ಸುಲಭವಾಗಿ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪ್ರಗತಿನಿಧಿ, ಜ್ಞಾನ ವಿಕಾಸ, ತರಬೇತಿ, ಮಧ್ಯವರ್ಜನ ಶಿಬಿರ ವಸತಿ ಸೌಲಭ್ಯ ವಿದ್ಯಾರ್ಥಿ ವೇತನ, ಪಿಂಚಣಿ ಪರಿಸರ ಹಾಗೂ ಕೆರೆಗಳ ಸಂರಕ್ಷಣೆ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಸ್ವಸಹಾಯ ಸಂಘದ ಸದಸ್ಯರು ಆರ್ಥಿಕವಾಗಿ ಸಬಲರಾಗಲು ಈ ಯೋಜನೆಯು ತುಂಬಾ ಉಪಯುಕ್ತವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನಗೋಡು ವಲಯ ಮೇಲ್ವಿಚಾರಕಿ ಪುಷ್ಪಲತಾ, ಸೇವಾ ಪ್ರತಿನಿಧಿಗಳಾದ ಮಮತಾ, ಮಂಜುಳಾ ಗ್ರಾಮದ ಮುಖಂಡ ಮಾದೇಗೌಡ ಸೇರಿದಂತೆ ಸ್ವ ಸಹಾಯ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net