ವೈಜ್ಞಾನಿಕ ಹೈನುಗಾರಿಕೆಯಿಂದ ಆರ್ಥಿಕ ಅಭಿವೃದ್ಧಿ

nss
ಶಿಕಾರಿಪುರ ತಾಲೂಕು ನೆಲವಾಗಿಲು ಗ್ರಾಮದಲ್ಲಿ ಏರ್ಪಡಿಸಿದ್ದ ಜಾನುವಾರು ರೋಗಗಳಿಗೆ ಮನೆಮದ್ದು ಜಾಗೃತಿ ಕಾರ್ಯಕ್ರಮವನ್ನು ಡಾ.ನಾರಾಯಣ ಎಸ್.ಮಾವರ್ಕರ್ ಉದ್ಘಾಟಿಸಿದರು. ಡಾ.ಅರುಣ್‌ಕುಮಾರ್, ಡಾ.ರವಿಕುಮಾರ್, ಡಾ.ಅಶೋಕ್ ಮುಂತಾದವರಿದ್ದರು.
Published on

ಶಿವಮೊಗ್ಗ: ರೈತರು ವೈಜ್ಞಾನಿಕ ಹೈನುಗಾರಿಕೆ ಪದ್ಧತಿ ಅಳವಡಿಸಿಕೊಂಡರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿ ವಿದ್ಯಾರ್ಥಿ ಕಲ್ಯಾಣ ಡೀನ ಡಾ.ನಾರಾಯಣ ಎಸ್.ಮಾವರ್ಕರ್ ಹೇಳಿದರು.

ಶಿಕಾರಿಪುರ ತಾಲೂಕು ನೆಲವಾಗಿಲು ಗ್ರಾಮದಲ್ಲಿ ವಿವಿಯಿಂದ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಸೋಮವಾರ ಜಾನುವಾರು ರೋಗಗಳಿಗೆ ಮನೆಮದ್ದು ಹಾಗೂ ವೈಜ್ಞಾನಿಕ ಹೈನುಗಾರಿಕೆ ನಿರ್ವಹಣಾ ಕ್ರಮಗಳು ಎಂಬ ವಿಷಯದ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆಯತ್ತ ಬರಬೇಕು ಎಂದರು.

ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ರವಿಕುಮಾರ್, ಜಾನುವಾರುಗಳಿಗೆ ಎದುರಾಗುವ ರೋಗಗಳಿಗೆ ಮನೆಮದ್ದುಗಳನ್ನು ತಯಾರಿಸುವ ಬಗ್ಗೆ ರೈತರಿಗೆ ಪ್ರಾಯೋಗಿಕವಾಗಿ ವಿವರಿಸಿದರು. ಮನೆಮದ್ದಿನಿಂದ ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಂಡು ಹೆಚ್ಚಿನ ಆದಾಯ ಪಡೆಯಬಹುದೆಂದು ತಿಳಿಸಿದರು.

ಜನರಲ್ಲಿ ಹೈನುಗಾರಿಕೆ ಕುರಿತು ಜಾಗೃತಿ ಮೂಡಿಸಲು 50ಕ್ಕೂ ಅಧಿಕ ರಾಸುಗಳೊಂದಿಗೆ ಜಾಥಾ ನಡೆಸಲಾಯಿತು. ಎನ್‌ಎಸ್‌ಎಸ್ ಸಂಯೋಜಕ ಡಾ.ನಂದೀಶ್, ಯುವ ರೈತ ಪ್ರವೀಣ್, ವಿಜ್ಞಾನಿಗಳಾದ ಡಾ.ಅಶೋಕ್, ಡಾ.ಅರುಣ್‌ಕುಮಾರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net