

ಜಯಪುರ: ಜಯಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಈ ಭಾಗದ ರೈತರ, ಕೂಲಿ ಕಾರ್ಮಿಕರು ಹಾಗೂ ಸಣ್ಣ ವ್ಯಾಪಾರಿಗಳ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡುತ್ತಿದೆ ಎಂದು ಜಯಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ರಾಜೇಂದ್ರ ಹೇಳಿದರು.
ಶುಕ್ರವಾರ ಜಯಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಆಯೋಜನೆಗೊಂಡ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಒಗ್ಗಟ್ಟು ಹಾಗೂ ಸರ್ವ ಸದಸ್ಯರ ಸಹಕಾರದಿಂದ ಸಂಸ್ಥೆ ಇಂದು ಲಾಭದಾಯಕವಾಗಿ ನಡೆಯುವ ಜತೆಗೆ ಷೇರುದಾರರ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.
ಸಹಕಾರ ಸಂಘವು ಸುಮಾರು 1,402 ಸದಸ್ಯರನ್ನು ಹೊಂದಿದ್ದು , ಪ್ರತಿಯೊಬ್ಬರಲ್ಲೂ ಇದು ನಮ್ಮ ಸಂಸ್ಥೆ ಎನ್ನುವ ಭಾವನೆ ಬೆಳೆದಿದೆ. ಆಡಳಿತ ಮಂಡಳಿಯು ಸದಸ್ಯರ ನಂಬಿಕೆಗೆ ಚ್ಯುತಿ ಬಾರದಂತೆ ಸಹಕಾರ ತತ್ವದಡಿ ಕಾರ್ಯಾಚರಿಸುತ್ತಿದೆ. 2022-23ನೇ ಸಾಲಿನಲ್ಲಿ ಸಂಘ ಸುಮಾರು 3.75 ಕೋಟಿ ರೂ.ವ್ಯವಹಾರ ನಡೆಸಿದ್ದು ಪ್ರಸಕ್ತ ಸಾಲಿನಲ್ಲಿ ಸುಮಾರು 10.5ರಷ್ಟು ಲಾಭಗಳಿಸಿದೆ ಎಂದರು.
ಉಪಾಧ್ಯಕ್ಷೆ ಜಯಲಕ್ಷ್ಮಿ, ವ್ಯವಸ್ಥಾಪಕ ಶಂಕರ್‌ಗೌಡ, ನಿರ್ದೇಶಕರಾದ ಯಜ್ಞಮೂರ್ತಿ ಎಚ್.ಕೆ.ರಾಜೇಶ್, ಎ.ಆರ್.ವೆಂಕಟೇಶ್, ಡಿ.ಪಿ.ಹುಮಾಯೂನ್ ಕಬೀರ್, ಣಿರಾಜ್ ಎಸ್.ಜೆ.ಚಿನ್ನಯ್ಯ, ಡಿ.ಪಿ.ಹರೀಶ್ ಪೂಜಾರಿ, ಸುಜಾತಾ, ಶೇಖರ, ಗುರುಮೂರ್ತಿ ಕೆ.ಎಸ್. ರಾಜೇಶ್, ಲೀಲಾವತಿ ಇದ್ದರು.