ಮಾರುಕಟ್ಟೆ ಕಟ್ಟಡ ಪೂರ್ಣಗೊಳ್ಳದ ಕಾರಣ, ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನೂರಾರು ವ್ಯಾಪಾರಿಗಳು ಇಂದು ಅನಿವಾರ್ಯವಾಗಿ ರಸ್ತೆ ಬದಿಯ ಫುಟ್‌ಪಾತ್‌ಗಳನ್ನೇ ಆಶ್ರಯಿಸಿದ್ದಾರೆ. ಕಂಕನಾಡಿಯ ಪ್ರಸಿದ್ಧ ಹೂವಿನ ಮಾರುಕಟ್ಟೆ ಇಂದು ಧೂಳು ಮತ್ತು ಬಿಸಿಲಿನ ನಡುವೆ ರಸ್ತೆ ಬದಿಯಲ್ಲೇ ನಡೆಯುತ್ತಿದೆ. ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನ ನಡುವೆ ತರಕಾರಿ ವ್ಯಾಪಾರ ನಡೆಯುತ್ತಿದ್ದು, ಗ್ರಾಹಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಮಾರುಕಟ್ಟೆ ಕಾಮಗಾರಿ ನಡೆಯುತ್ತಿರುವ ಪ್ರದೇಶವು ನಗರದ ಅತ್ಯಂತ ಜನನಿಬಿಡ ವೃತ್ತಗಳಲ್ಲಿ ಒಂದಾಗಿದೆ. ಕಾಮಗಾರಿಯ ಸಾಮಗ್ರಿಗಳು ಮತ್ತು ರಸ್ತೆ ಬದಿಯ ವ್ಯಾಪಾರದಿಂದಾಗಿ ಬಸ್‌ಗಳು ನಿಲ್ಲಲು ಸರಿಯಾದ ಜಾಗವಿಲ್ಲದೆ, ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಭಾಗದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ನಿಗದಿತ ನಿಲ್ದಾಣವಿಲ್ಲದೆ ಅವರು ಪರದಾಡುವಂತಾಗಿದೆ.