

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಸಂಸ್ಥೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳು ಇಲ್ಲಿ ನೀಡಲಾದ ಮಾಹಿತಿಗಳ ಅನ್ವಯ ಅರ್ಜಿ ಸಲ್ಲಿಸಬಹುದು.
ವಿಭಾಗವಾರು ಹುದ್ದೆಗಳು
ಇಎಂ 190
ಎಲೆಕ್ಟ್ರಿಷಿಯನ್ 80
ಫಿಟ್ಟರ್ 80
ಟರ್ನರ್ 20
ಮೆಕ್ಯಾನಿಸ್ಟ್ 15
ಮೆಕ್ಯಾನಿಸ್ಟ್ (ಜಿ) 10
ಕೋಪಾ 40
ವೆಲ್ಡರ್ 25
ಪೈಂಟರ್ 4
ಇತರ 20
ಅರ್ಜಿ ಸಲ್ಲಿಕೆ ವಿಧಾನ
*ಇಸಿಐಎಲ್‌ನ ವೆಬ್‌ಸೈಟ್‌ಗೆ ಲಾಗಿನ್ ಮಾಡಿಕೊಂಡು ಅರ್ಜಿ ವಿಭಾಗದಲ್ಲಿ ಕ್ಲಿಕ್ಕಿಸಬೇಕು
*ಆನ್‌ಲೈನ್ ನಮೂನೆಯ ಅರ್ಜಿ ದೊರೆಯಲಿದ್ದು, ಭರ್ತಿ ಮಾಡಿ ಅದೇ ವೆಬ್‌ಸೈಟ್‌ನಲ್ಲಿ ಕಳುಹಿಸಬೇಕು
ಅರ್ಹತೆಗಳೇನೇನು?
ವಿದ್ಯಾರ್ಹತೆ: ಅಭ್ಯರ್ಥಿ ಐಟಿಐ ತೇರ್ಗಡೆಯಾಗಿರಬೇಕು. ಜತೆಗೆ ಎನ್‌ಸಿವಿಟಿ ಪ್ರಮಾಣ ಪತ್ರ ಇರಬೇಕಿದ್ದು, ಅರ್ಜಿ ಸಲ್ಲಿಕೆ ವೇಳೆ ದಾಖಲೆಗಳ ಜತೆಗೆ ಸಲ್ಲಿಸಬೇಕು.
ವಯೋಮಿತಿ: 18 ವರ್ಷ ಪೂರೈಸಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಗರಿಷ್ಠ 25 ವರ್ಷ, ಒಬಿಸಿಗಳಿಗೆ 28 ವರ್ಷ, ಎಸ್ಸಿ/ಎಸ್ಟಿಗಳಿಗೆ 30 ವರ್ಷ ಗರಿಷ್ಠ ವಯೋಮಿತಿಯಾಗಿದೆ.
ಆಯ್ಕೆ ಹೇಗೆ?
*ಅಭ್ಯರ್ಥಿಗಳ ಆಯ್ಕೆಯು ಪ್ರಮುಖವಾಗಿ ಐಟಿಐ ಅಂಕಗಳ ಆಧಾರದಲ್ಲಿ ನಡೆಯಲಿದೆ
*ಶೇ.70 ಹುದ್ದೆಗಳನ್ನು ಸರ್ಕಾರಿ ಐಟಿಐ ಕಾಲೇಜು ಅಭ್ಯರ್ಥಿಗಳಿಗೆ ಹಾಗೂ ಶೇ.30 ಹುದ್ದೆಗಳನ್ನು ಖಾಸಗಿ ಐಟಿಐ ಕಾಲೇಜುಗಳ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
*ಅ.16ರಿಂದ ಅ.21ವರೆಗೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಈ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಸ್ಟೈಪೆಂಡ್ ಮಾಹಿತಿ
ಇಎಂ ಹುದ್ದೆಗಳಿಂದ ಕೋಪಾ ಹುದ್ದೆಗಳ ತನಕ 8,050 ರೂ., ಉಳಿದ ಎಲ್ಲ ವಿಭಾಗಗಳ ಹುದ್ದೆಗೆ ಮಾಸಿಕವಾಗಿ 7,700 ಸ್ಟೈಪೆಂಡ್ ನೀಡಲಾಗುತ್ತದೆ.
ಅಪ್ರೆಂಟಿಶಿಪ್ ಅವಧಿ
ಆಯ್ಕೆಯಾದ ಅಭ್ಯರ್ಥಿಗೆ ಒಂದು ವರ್ಷದ ಅವಧಿಗೆ ಅಪ್ರೆಂಟಿಶಿಪ್ ಅವಧಿ ಇರಲಿದ್ದು, ಈ ವರ್ಷದ ನವೆಂಬರ್‌ನಿಂದ ತರಬೇತಿ ಪ್ರಾರಂಭವಾಗಲಿದೆ.
ಅಪ್ರೆಂಟಿಸ್‌ನ ಕಾರ್ಯಗಳು
ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾ ಕರ್ತವ್ಯಗಳನ್ನು ನಿರ್ವಹಿಸಬೇಕು. ಜತೆಗೆ ಸಂಸ್ಥೆಯ ರಕ್ಷಣಾ ಕಾರ್ಯವಿಧಾನಗಳ ಜವಾಬ್ದಾರಿಯೂ ಇವರದ್ದಾಗಿದ್ದು, ವಿವಿಧ ಅಸೈನ್‌ಮೆಂಟ್‌ಗಳಿಗಾಗಿ ಸೈಟ್‌ಗಳಿಗೆ ಭೇಟಿ ನೀಡುವುದು ಅಪ್ರೆಂಟಿಸ್‌ಗಳ ಕಾರ್ಯವಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೆಯ ದಿನ: 10.10.2023
ಹೆಚ್ಚಿನ ಮಾಹಿತಿಗಾಗಿ ecil.co.in ಲಾಗಿನ್ ಮಾಡಬಹುದು