ರೆಸ್ಟೋರೆಂಟ್​ ಸ್ಟೈಲ್​​​ ಟೇಸ್ಟಿ ಪಾಲಕ್ ಪನ್ನೀರ್​​ ಮಾಡುವುದು ಬಹಳ ಸುಲಭ; ಇಲ್ಲಿದೆ ಸಿಂಪಲ್​ ರೆಸಿಪಿ

Untitled-design-46
Published on

ಪಾಲಕ್​ ಪನ್ನೀರ್​ ಗ್ರೇವಿ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ. ಚಪಾತಿ, ರೋಟಿಗೆ ಮಸ್ತ್​​ ಕಾಂಬಿನೇಷನ್​​. ಹೋಟೆಲ್​​ ಶೈಲಿಯಲ್ಲಿ ಈ ರುಚಿಕರ ಪಾಲಕ್​ ಪನ್ನೀರನ್ನು ಮನೆಯಲ್ಲಿಯೇ ಮಾಡಬಹುದು. ಚಿಕ್ಕಮಕ್ಕಳಿನಿಂದ ದೊಡ್ಡವರು ಇಷ್ಟು ಪಡುವಂತಹ ಟೇಸ್ಟಿ ಗ್ರೇವಿ. ಪಾಲಕ್​ ಎತ್ತೇಚ್ಚವಾಗಿ ಕಬ್ಬಿಣಾಂಶವನ್ನು ಹೊಂದಿದೆ. ಪನ್ನೀರ್​ ಪೊಟ್ಯಾಸಿಯಮ್‌ನ ಸಮೃದ್ಧ ಮೂಲವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುವುದರ ಜತೆಗೆ ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ಪಾಲಕ್​ ಪನ್ನೀರ್​ ಮಾಡುವ ಸಿಂಪಲ್​ ವಿಧಾನ ಇಲ್ಲಿದೆ..

  • ಪನ್ನೀರ್​​ 500 ಗ್ರಾಂ
  • ಹಸಿಮೆಣಸಿಕಾಯಿ
  • ಈರುಳ್ಳಿ
  • ಬೆಳ್ಳುಳ್ಳಿ
  • ಒಣಮೆಣಸಿನ ಕಾಯಿ
  • ಚಿಲ್ಲಿ, ಧನಿಯಾ ಪೌಡರ್
  • ಗರಂ ಮಸಾಲ​​
  • ಅರಿಶಿನಪುಡಿ
  • 1 ಕಟ್​ ಪಾಲಕ್
  • ಅಡುಗೆ ಎಣ್ಣೆ

ಪಾಲಕ್​ ಪನ್ನೀರ್​ ಮಾಡುವ ವಿಧಾನ:

  • ​​ಪಾಲಕ್​ ಅನ್ನು ನೀರಿನಲ್ಲಿ ಬೇಯಿಸಿ ಬಳಿಕ ಅದನ್ನು ತಣ್ಣಗಿನ ನೀರಿನಲ್ಲಿ ಹಾಕಿ. (ಬಳಸುವುದಾದರೆ ತಣ್ಣಗಿನ ನೀರಿಗೆ ಐಸ್​​ಕೂಬ್​ ಬಳಸಬಹುದು) ಸ್ವಲ್ಪ ಸಮಯದ ನಂತರ ಪಾಲಕ್​ ಜತೆಗೆ ಒಂದು ಹಸಿಮೆಣಸಿಕಾಯಿ, ಬೆಳ್ಳುಳ್ಳಿ 2 ಎಸಳು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಲಿಬೇಕು.
  • ಒಂದು ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣೆಲೆಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿಯನ್ನು ಗೋಲ್ಡನ್​ ಕಲರ್ ಬರುವವರೆಗೆ ಫ್ರೈ ಮಾಡಿ ಅದನ್ನು ಬಳಿಕ ಮಿಕ್ಸಿಯಲ್ಲಿ ಹಾಕಿ ಪೇಸ್ಟ್​ ಮಾಡಿಕೊಳ್ಳಿ. ಪನ್ನೀರ್​ ಅನ್ನು ಬಾಕ್ಸ್​​​ ರೂಪದಲ್ಲಿ ಕಟ್​ ಮಾಡಿಕೊಂಡು, ಬಾಣಲೆಯಲ್ಲಿ ಸ್ವಲ್ಪ ಅಡುಗೆ ಎಣ್ಣೆ ಹಾಕಿ ಗೋಲ್ಡನ್​​ ಕಲರ್​​ ಬರುವವರೆಗೂ ಫ್ರೈ ಮಾಡಿ.
  • ಬಳಿಕ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ 3ಏಲಕ್ಕಿ, 1ಚಕ್ಕೆ 3ಲವಂಗ, ಸ್ವಲ್ಪ ಜಿರಿಗೆ, 3 ಒಣಗಿದ ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಈರುಳ್ಳಿ, ಉದ್ದವಾಗಿ ಹೆಚ್ಚಿದ 2 ಹಸಿಮೆಣಸಿಕಾಯಿಯನ್ನು ಹಾಕಿ, ಈರುಳ್ಳಿ ಪೇಸ್ಟ್​​ ಅನ್ನು ಹಾಕಿ ಫ್ರೈ ಮಾಡಿ.
  • ಅರಿಸಿನಪುಡಿ, ಸ್ವಲ್ಪ ಚಿಲ್ಲಿ ಪೌಡರ್​​, ಧನಿಯಾಪುಡಿ, ಸ್ವಲ್ಪ ಗರಂ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ 2 ಸೆಕೆಂಡ್​ ಬಳಿಕ ರುಬ್ಬಿದ ಪಾಲಕ್​ ಸೇರಿಸಿ ಮಿಕ್ಸ್​ ಮಾಡಿ. ಗ್ರೇವಿ ಹದಕ್ಕೆ ತಕ್ಕಂತೆ ಸ್ವಲ್ಪ ನೀರು ಸೇರಿಸಿ. ಸ್ವಲ್ಪ ಸಮಯದ ಬಳಿಕ ಫ್ರೈ ಮಾಡಿರುವ ಪನ್ನೀರ್​ ಸೇರಿಸಿ 5 ನಿಮಿಷ ಬೇಯಿಸಿದರೆ ಪಾಲಕ್ ಪನ್ನೀರ್​ ಸವಿಯಲು ಸಿದ್ಧ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net