ಮುಂಬೈ: ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಹಲವು ವರ್ಷಗಳು ಡೇಟಿಂಗ್ ಮಾಡಿದ ನಂತರ 2012 ರಲ್ಲಿ ವಿವಾಹವಾದರು. ಆದರೆ ಈ ಮೊದಲೆ ಸೈಫ್ ಅಲಿ ಖಾನ್ಗೆ ಅಮೃತಾ ಸಿಂಗ್ ಜತೆ ವಿವಾಹವಾಗಿತ್ತು. ಆದರೆ ಅಮೃತಾ ಮತ್ತು ಸೈಫ್ 2004ರಲ್ಲಿ ದೂರಾಗಿದ್ದರು. ಸೈಫ್ ಮೊದಲ ಮದುವೆಗೆ ಸಂಬಂಧಿಸಿದಂತೆ ಕರೀನಾ ತನ್ನ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಇದನ್ನು ಓದಿ: ಬಾಂಗ್ಲಾದಲ್ಲಿನ ಭಾರತೀಯರನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ; ಸೋನು ಸೂದ್
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಕರೀನಾ, ಸೈಫ್ ಮೊದಲೆ ಮದುವೆಯಾಗಿದ್ದರು ಮತ್ತು ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ ಎಂಬುದನ್ನು ನಾನು ಗೌರವಿಸುತ್ತೇನೆ. ನಾನು ಅಮೃತಾ ಸಿಂಗ್ ಅವರ ಅಭಿಮಾನಿ. ನಾನು ಅವರನ್ನು ಎಂದಿಗೂ ಭೇಟಿ ಮಾಡಿಲ್ಲ, ಆದರೆ ಅವರ ಚಲನಚಿತ್ರಗಳ ಮೂಲಕ ನಾನು ಅಮೃತಾಳನ್ನು ತಿಳಿದಿದ್ದೇನೆ. ನನ್ನ ಪ್ರಕಾರ ಅಮೃತಾ ಸೈಫ್‌ನ ಜೀವನದಲ್ಲಿ ಯಾವಾಗಲೂ ಪ್ರಮುಖಳಾಗಿದ್ದಾಳೆ, ಏಕೆಂದರೆ ಅವಳು ಸೈಫ್ ಅಲಿ ಖಾನ್‌ನ ಮೊದಲ ಹೆಂಡತಿ ಮತ್ತು ಅವನ ಮಕ್ಕಳ ತಾಯಿ. ಇದನ್ನು ನಾನು ಸೈಫ್‌ಗೂ ಕೂಡ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಅಮೃತಾ ಯಾವಾಗಲೂ ಅಂತಹ ಗೌರವವನ್ನು ಹೊಂದಿರಬೇಕೆಂದು ನಾನು ಬಯಸುತ್ತೇನೆ. ಅವರು ಸೈಫ್ ಅವರೊಂದಿಗೆ ಸ್ನೇಹಿತರಾಗಲು ಪ್ರೋತ್ಸಾಹಿಸಿದ್ದೇನೆ. ಇದಕ್ಕೆ ಅವರಿಗೂ ಸಮಯ ಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ ಸೈಫ್‌ನ ಯಾವುದೇ ಸಂಬಂಧಕ್ಕೆ ಸಂಬಂಧಿಸಿದಂತೆ ನಾನು ಬೇರಿ ರೀತಿ ಯೋಚಿಸುವುದಿಲ್ಲ. ಅದೆಲ್ಲಾ ಮುಖ್ಯವೆಂದು ನನಗೆ ಅನ್ನಿಸುವುದಿಲ್ಲ ಎಂದು ಕರೀನಾ ಹೇಳಿದ್ದಾರೆ.
ಅದಷ್ಟೇ ಅಲ್ಲದೆ ತಮ್ಮ ವಿವಾಹದ ಬಗ್ಗೆ, ಮದುವೆ ನನ್ನನ್ನು ಉತ್ತಮವಾಗಿ ಬದಲಾಯಿಸಿದೆ. ನಾನು ಹೆಚ್ಚು ಜವಾಬ್ದಾರಿ ಪಡೆದುಕೊಂಡಿದ್ದೇನೆ. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಯಾವಾಗಲೂ ನನಗೆ ಸೈಫ್ ಹೇಳುತ್ತಾನೆ ಎಂದು ಹೇಳಿದರು. ಕರೀನಾ ಮತ್ತು ಸೈಫ್ 16 ಅಕ್ಟೋಬರ್ 2012ರಂದು ವಿವಾಹವಾದರು. ಈ ದಂಪತಿಗೆ ತೈಮೂರ್ ಅಲಿ ಖಾನ್, ಜಹಾಂಗೀರ್ ಅಲಿ ಖಾನ್ ಎಂಬ ಇಬ್ಬರು ಪುತ್ರರಿದ್ದಾರೆ. ಸೈಫ್ ಮತ್ತು ಅವರ ಮಾಜಿ ಪತ್ನಿ ಅಮೃತಾ ಅವರಿಗೆ . ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಸೈಫ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಕಿಂಗ್‌ಹ್ಯಾಮ್ ಮರ್ಡರ್ಸ್, ಸಿಂಗಮ್ ಎಗೇನ್ ಮತ್ತು ಮೇಘನಾ ಗುಲ್ಜಾರ್ ಸಿನಿಮಾಗಳಲ್ಲಿ ಬಿಸಿಯಿರುವ ನಟಿ ಕರೀನಾ ಕೊನೆಯದಾಗಿ ಕ್ರ್ಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.(ಏಜೆನ್ಸೀಸ್)
ಈ ವಿಚಾರ ಮಾತನಾಡುವುದು ನನಗೆ ಬೇಸರ ತಂದಿದೆ ಎಂದಿದ್ದೇಕೆ ಸನ್ನಿ ಲಿಯೋನ್