ಏನ್​ ಟೇಸ್ಟ್ ಗೊತ್ತಾ ಈ ಚಿಕನ್​ ಕಟ್ಲೆಟ್​​ : ಮಾಡುವ ಸುಲಭ ವಿಧಾನ ಹೀಗಿದೆ

Untitled-design-46-1
Published on

ರುಚಿಕರವಾದ ಚಿಕನ್ ಕಟ್ಲೆಟ್​ ಅನ್ನು ಮಕ್ಕಳು ಇಷ್ಟಪಡದೇ ಇರಲು ಸಾಧ್ಯವೆ ಇಲ್ಲ. ಪ್ರೋಟೀನ್​​ ಸಮೃದ್ಧವಾಗಿರುವ ಇದು ಮಕ್ಕಳಿಗೆ ಅತ್ಯಗತ್ಯ ಆಹಾರದಲ್ಲಿ ಒಂದು ಎಂದರೆ ತಪ್ಪಾಗಲಾರದು. ನೀವು ಈ ಚಿಕನ್​ ಕಟ್ಲೆಟ್​​ ಅನ್ನು ಸ್ಯಾಂಡ್ವಿಚ್​ಗಳಿಗೂ ಬಳಸಬಹುದು. ಬರ್ತ್​​ಡೆ, ಕಿಟ್ಟಿ ಪಾರ್ಟಿಗಳಲ್ಲಿ ಸುಲಭವಾಗಿ ತಯಾರಿಸಬಹುದಾದ ಸಿಂಪಲ್​ ರೆಸಿಪಿ. ಚಿಕನ್​ ಕಟ್ಲೆಟ್​​ ಮಾಡುವ ಸುಲಭ ವಿಧಾನ ಹೀಗಿದೆ

  • 250 ಗ್ರಾಂ ಬೋನ್​ಲೆಸ್​ ಚಿಕನ್​
  • 6-7 ಬ್ರೆಡ್ ಪಿಸ್​​
  • ರುಚಿಗೆ ತಕ್ಕಂತೆ ಉಪ್ಪು
  • 1 ತುಣುಕು ಶುಂಠಿ
  • ಬೆಳ್ಳುಳ್ಳಿ
  • 3 ಹಸಿರು ಮೆಣಸಿನಕಾಯಿ
  • ಮೆಣಸು
  • ಕೆಂಪು ಮೆಣಸಿನಕಾಯಿ
  • 4 ಸ್ಪೂನ್​ಗಳಷ್ಟು ಮೈದಾ ಹಿಟ್ಟು
  • ಅಡುಗೆ ಎಣ್ಣೆ ಚಿಕನ್​ ಕಟ್ಲೆಟ್​​​ ಮಾಡುವ ವಿಧಾನ:
  • ಎರಡು ಬ್ರೆಡ್ ತುಂಡುಗಳಿಗೆ ಅರ್ಧ ಕಪ್ ಹಾಲು ಸೇರಿಸಿ 10 ನಿಮಿಷಗಳ ಕಾಲ ನೆನೆಸಿ.
  • ಮೊದಲು ಮಿಕ್ಸರ್ ಜಾರ್ ತೆಗೆದುಕೊಂಡು ಅದರಲ್ಲಿ ಶುಚಿಗೊಳಿಸಿದ ಬೋನ್ ಲೆಸ್ ಚಿಕನ್ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ, 2 ಚಮಚ ಮೈದಾಹಿಟ್ಟು, ಕೆಂಪು ಮೆಣಸಿನಕಾಯಿ, ಉಪ್ಪು ಮತ್ತು ಕರಿಮೆಣಸು, ಒಂದು ಮೊಟ್ಟೆ, ಹಾಲಿನಲ್ಲಿ ನೆನೆಸಿದ ಬ್ರೆಡ್ ಅನ್ನು ರುಬ್ಬಿದ ಚಿಕನ್​ಗೆ ಸೇರಿಸಿ ಮಿಶ್ರಣ ಮಾಡಿ. ಇದನ್ನು 15 ನಿಮಿಷಗಳ ಕಾಲ ಫ್ರೀಜರ್‌ನಲ್ಲಿ ಇರಿಸಿ.
  • ಉಳಿದ ನಾಲ್ಕು ಬ್ರೆಡ್​​​ಗಳನ್ನು ಒಂದು ತಟ್ಟೆಯಲ್ಲಿ ಪುಡಿ ಮಾಡಿಕೊಳ್ಳಿ, ಮತ್ತೊಂದು ಕಪ್​ನಲ್ಲಿ ಮೊಟ್ಟೆ , ಬ್ಲೌಲ್​​ನಲ್ಲಿ ಮೈದಾಹಿಟ್ಟು ತೆಗೆದುಕೊಳ್ಳಿ. ಫೀಜರ್​​ನಲ್ಲಿ ಇಟ್ಟಿದ್ದ ಚಿಕನ್​ ಮಿಶ್ರಣವನ್ನು ಉಂಡೆಯಾಗಿ ಅಥವಾ ನಿಮಿಗಿಷ್ಟದ ರೂಪದಲ್ಲಿ ಒಂದು ಆಕಾರ ಮಾಡಿಕೊಳ್ಳಿ.
  • ಬಾಣಲೆಯಲ್ಲಿ ಅಡುಗೆ ಎಣ್ಣೆಯನ್ನು ಬಿಸಿಮಾಡಿಕೊಳ್ಳಿ. ನಂತರ ಸಿದ್ಧಪಡಿಸಿಕೊಂಡಿರುವ ಮೈದಾಹಿಟ್ಟು, ಮೊಟ್ಟೆ, ಬ್ರೆಡ್​​ ಪುಡಿಗೆ ಅನುಕ್ರಮವಾಗಿ ಅದ್ದಿ ಬಿಸಿಯಾಗಿರುವ ಎಣ್ಣೆಯಲ್ಲಿ ಹಾಕಿ ಗೋಲ್ಡೆನ್​​ ಬ್ರೌನ್​ ಬರುವವರೆಗೂ ಬೇಯಿಸಿ. ನಂತರ ಎಣ್ಣೆಯಿಂದ ಹೊರತೆಗೆದರೆ ರುಚಿಯಾದ ಚಿಕನ್​ ಕಟ್ಲೆಟ್ ಸವಿಯಲು ಸಿದ್ಧ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net