More

  ನಿದ್ರಾಹೀನತೆ ಕಾಡ್ತಿದ್ಯಾ.. ಈ ಹಣ್ಣುಗಳನ್ನು ತಿಂದರೆ ಸಮಸ್ಯೆ ನಿವಾರಣೆ ಆಗೋದು ಪಕ್ಕಾ!

  ದಿನವಿಡೀ ದಣಿದಿದ್ದರೂ ರಾತ್ರಿ ನಿದ್ರೆ ಮಾಡಲು ಸಾಕಷ್ಟು ಹರಸಾಹಸ ಪಡುವವರು ಅನೇಕರಿದ್ದಾರೆ. ಜೀವನದಲ್ಲಿ ಹೆಚ್ಚುತ್ತಿರುವ ಒತ್ತಡವು ನಮ್ಮ ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯದ ಮೇಲೂ ಭಾರಿ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯು ದುರ್ಬಲ ರೋಗನಿರೋಧಕ ಶಕ್ತಿ, ಅಧಿಕ ರಕ್ತದೊತ್ತಡ, ಕಿರಿಕಿರಿ, ಆಯಾಸ ಮತ್ತು ಮೂಡ್ ಸ್ವಿಂಗ್‌ಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಸಾಕಷ್ಟು ನಿದ್ರೆ ಪಡೆಯುವುದು ಮುಖ್ಯ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದರಿಂದ ಉತ್ತಮ ನಿದ್ರೆಗೆ ಪ್ರಯೋಜನಕಾರಿಯಾಗಲಿದೆ. ಉತ್ತಮ ನಿದ್ರೆ ಪಡೆಯಲು ಯಾವ ಹಣ್ಣುಗಳು ಸಹಾಯ ಮಾಡುತ್ತವೆ ಎಂಬುದರ ವಿವರ ಇಲ್ಲಿದೆ

  ಇದನ್ನು ಓದಿ: ಸಖತ್​ ಟೆಸ್ಟಿ ಆಚಾರಿ ಮಟನ್​ ಚಾಪ್ಸ್​​​ ಮಾಡುವುದು ಸುಲಭ: ಹೀಗಿದೆ ಮಾಡುವು ವಿಧಾನ

  • ಬಾಳೆಹಣ್ಣು: ಬಾಳೆಹಣ್ಣು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ವಿಟಮಿನ್ ಬಿ-6, ಮೆಗ್ನೀಷಿಯಂನಂತಹ ಪೋಷಕಾಂಶಗಳಿವೆ. ವಿಟಮಿನ್ ಬಿ-6 ದೈಹಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡಿದರೆ, ಮೆಗ್ನೀಷಿಯಂ ಒತ್ತಡವನ್ನು ಕಡಿಮೆ ಮಾಡುತ್ತದೆ.
   ಚೆರ್ರಿ: ಚೆರ್ರಿ ಮೆಲಟೋನಿನ್ ಎಂಬ ಹಾರ್ಮೋನ್ ಅನ್ನು ಹೊಂದಿರುತ್ತದೆ. ಉತ್ತಮ ನಿದ್ರೆಗೆ ಈ ಹಾರ್ಮೋನ್ ಅವಶ್ಯಕ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ.
  • ಕಿವಿ ಫ್ರೂಟ್​​: ವಿಟಮಿನ್ ಸಿ ಸಮೃದ್ಧವಾಗಿರುವ ಕಿವಿ ಹಣ್ಣಿನಲ್ಲಿ ಸಿರೊಟೋನಿನ್ ಮತ್ತು ಪೊಟ್ಯಾಸಿಯಮ್ ಕೂಡ ಇದೆ. ಇದು ಒತ್ತಡವನ್ನು ಕಡಿಮೆ ಮಾಡಿ ನಿದ್ರಾಹೀನತೆ ಸಮಸ್ಯೆ ಸುಧಾರಿಸಲು ಸಹಕಾರಿಯಾಗಿದೆ.
  • ಅನಾನಸ್: ಅನಾನಸ್ ಹಣ್ಣಿನಲ್ಲಿ ಬ್ರೋಮೆಲೈನ್ ಎಂಬ ಕಿಣ್ವವಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಅನಾನಸ್ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಪಪ್ಪಾಯಿ: ಪಪ್ಪಾಯಿಯಲ್ಲಿ ವಿಟಮಿನ್ ಸಿ , ಇ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಇದೆ. ಪೊಟ್ಯಾಸಿಯಮ್ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಲ್ಲದೆ ಪಪೈನ್ ಎಂಬ ಕಿಣ್ವ ಇರುವುದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಉತ್ತಮ ಜೀರ್ಣಕ್ರಿಯೆಯಿಂದಾಗಿ ನಿದ್ರೆ ಕೂಡ ಸುಧಾರಿಸುತ್ತದೆ.
  • ಸೇಬು: ಫೈಬರ್ ಮತ್ತು ನೈಸರ್ಗಿಕ ಸಕ್ಕರೆ ಹೊಂದಿರುವ ಸೇಬು ನಮ್ಮ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
  • ಅಂಜೂರ: ಅಂಜೂರದ ಹಣ್ಣುಗಳಲ್ಲಿ ಕಬ್ಬಿಣದ ಅಂಶ ಅಧಿಕವಾಗಿರುತ್ತದೆ. ರೆಸ್ಟ್​ಲೆಸ್​​ ಲೆಗ್​ ಸಿಂಡ್ರೋಮ್​ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

  ಬೇಳೆಕಾಳುಗಳನ್ನು ಅತಿಯಾಗಿ ಬೇಯಿಸುವುದನ್ನು ತಪ್ಪಿಸಬೇಕು: ಐಸಿಎಂಆರ್ ಸೂಚನೆ

  See also  ಹಬ್ಬದ ಸಂಭ್ರಮದಲ್ಲಿ ಮರೆಯಾದ ಕರೊನಾ ಭಿತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts