ಚಿತ್ರ ವಿ-ಚಿತ್ರ: ಸುಲಭವಾಗಿ ಕಲ್ಲಂಗಡಿ ಕತ್ತರಿಸಿ

sudina 2
Published on

ನವದೆಹಲಿ: ದೈನಂದಿನ ಬದುಕಿನ ಕೆಲಸಕಾರ್ಯಗಳನ್ನು ಸುಲಭಗೊಳಿಸುವ ಅನೇಕ ಉಪಾಯಗಳನ್ನು, ಸಲಹೆ ಸೂಚನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಲೇ ಇರುತ್ತೇವೆ. ಅಲ್ಲದೆ ಇಂಥವು ಬಹಳ ಜನಪ್ರಿಯತೆಯನ್ನೂ ಪಡೆಯುತ್ತವೆ.

ಇತ್ತೀಚೆಗೆ ಮಹಿಳೆಯೊಬ್ಬರು ಕಲ್ಲಂಗಡಿ ಹಣ್ಣನ್ನು ಸುಲಭವಾಗಿ ಕತ್ತರಿಸುವ ವಿಧಾನವನ್ನು ವಿಡಿಯೋದ ಮೂಲಕ ಪ್ರಸ್ತುತಪಡಿಸಿದ್ದಾರೆ. ಇದರಲ್ಲಿ ಅರ್ಧಕ್ಕೆ ಕತ್ತರಿಸಲ್ಪಟ್ಟ ಕಲ್ಲಂಗಡಿ ಹಣ್ಣನ್ನು ಹೋಳುಗಳನ್ನಾಗಿ ಮಾಡಲು ಚಾಕು ಬಳಸುವ ಅಗತ್ಯವಿಲ್ಲ. ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸುವ ಡೆಂಟಲ್ ಫ್ಲೋಸ್ (ದಾರ) ಸಾಕು ಎಂಬುದನ್ನು ಅವರು ತೋರಿಸಿದ್ದಾರೆ. ಈ ವಿಧಾನಕ್ಕೆ ಗೇಲಿಯೂ ಸೇರಿದಂತೆ ವಿವಿಧ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net