

Food: ಇಂದಿನ ದಿನಗಳಲ್ಲಿ ಹಲವಾರು ಜನರು ರುಚಿರುಚಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಬಯಸುತ್ತಾರೆ. ವಿವಿಧ ಖಾದ್ಯಗಳ ಮೊರೆ ಹೋಗುತ್ತಾರೆ. ಇನ್ನು ಮನೆಯಲ್ಲಿಯೇ ಮಾಡಿಕೊಂಡು ತಿನ್ನಲು ಸಹ ಇಷ್ಟಪಡುತ್ತಾರೆ. ಇದೇ ರೀತಿಯಾಗಿ ಆಹಾರ ಪ್ರಿಯರಿಗೆಂದೇ ಈ ಹೊಸ ವಿಧದ ರೆಸಿಪಿ ತಿಳಿಸಿಕೊಡಲಾಗಿದೆ. ಇಂದೇ ಟ್ರೈ ಮಾಡಿ ಮ್ಯಾಕರೋನಿ ಮಸಾಲ..
* 2 ಕಪ್ ಮ್ಯಾಕರೋನಿ (ಎಲ್ಬೋ ಪಾಸ್ತಾ )
*2 ಚಮಚ ಬೆಣ್ಣೆ ಅಥವಾ ಎಣ್ಣೆ
* 1/2 ಚಮಚ ಜೀರಿಗೆ
* 2 ಹಸಿ ಮೆಣಸಿನಕಾಯಿ
* 2 ಟೊಮ್ಯಾಟೊ
* 1 ಕಪ್ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ
* 1/2 ಚಮಚ ಅರಿಶಿಣ
* 1/2 ಚಮಚ ಗರಂ ಮಸಾಲ
* 2 ಚಮಚ ಧನಿಯ ಪುಡಿ
* ಉಪ್ಪು
ಮೊದಲು ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಪಾಸ್ತಾ ಹಾಕಿ 8-10 ನಿಮಿಷ ಬೇಯಿಸಿಟ್ಟುಕೊಳ್ಳಿ. ನಂತರ ಒಂದು ಕಡಾಯಿಗೆ ಎಣ್ಣೆ/ಬೆಣ್ಣೆ, ಜೀರಿಗೆ, ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿ. ನಂತರ ಟೊಮೊಟೋ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ ಸೇರಿಸಿ ಬೇಯಿಸಿರಿ. ಇದಾದ ಬಳಿಕ ಬೇಯಿಸಿಟ್ಟುಕೊಂಡಿರುವ ಪಾಸ್ತ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಅರಿಶಿಣ, ಗರಂ ಮಸಾಲ, ಉಪ್ಪು ಹಾಕಿ ಬೇಕಾದಲ್ಲಿ ಚೀಸ್ ಸೇರಿಸಿ ಮೆಲ್ಟ್ ಆಗುವವರೆಗೂ ಚೆನ್ನಾಗಿ ಬೇಯಿಸಿ. ನಂತರ ರುಚಿಕರವಾದ ತಿಂಡಿಯನ್ನು ಸವಿಯಿರಿ. (ಏಜೆನ್ಸೀಸ್)