

ಆಂಧ್ರಪ್ರದೇಶ: ಪೊಲೀಸರಿಂದ ಕಣ್ತಪ್ಪಿಸಿಕೊಂಡು ಅಲೆದಾಡುತ್ತಿರುವ ಮೋಸ್ಟ್ ವಾಂಟೆಡ್ ಮಹಿಳೆಯ ಬಗ್ಗೆ ಮಾಹಿತಿ ನೀಡಿದರೆ ನಗದು ಬಹುಮಾನ ನೀಡುವುದಾಗಿ ಪೂರ್ವ ಗೋದಾವರಿ ಜಿಲ್ಲಾ ಪೊಲೀಸರು ಘೋಷಿಸಿದ್ದಾರೆ.
ಜಗದಂಬಾ ಅಲಿಯಾಸ್ ಬುಜ್ಜಿ, ಈಕೆ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಾಳೆ. ಮೊದಲು ಅವರ ಜತೆ ಮಾತನಾಡಿ ಸ್ನೇಹ ಸಂಪಾದಿಸಿ ನಂತರ ಅವರಿಗೆ ತಿಳಿಯದ ಹಾಗೆ ನಿದ್ದೆ ಮಾತ್ರೆ ಬೆರೆಸಿದ ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪುವಂತೆ ಮಾಡುತ್ತಾಳೆ. ಬಳಿಕ ಚಿನ್ನಾಭರಣ ಹಾಗೂ ನಗದನ್ನು ಕದ್ದು ಅಲ್ಲಿಂದ ಪರಾರಿಯಾಗುತ್ತಾಳೆ. ಈಕೆ ಹೀಗೆ ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾಳೆ.
ಮಹಿಳೆಯನ್ನು ಹುಡುಕಿ ಸುಸ್ತಾಗಿರುವ ಪೊಲೀಸರು ಕೊನೆಗೂ ಆಕೆಯನ್ನು ಹಿಡಿದುಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಮೇಲಿನ ಫೋಟೋದಲ್ಲಿರುವ ಮಹಿಳೆ ಜಗದಂಬಾ ಕಂಡರೆ ದಯವಿಟ್ಟು 9491326456 ಅಥವಾ 996333265 ಅನ್ನು ಸಂಪರ್ಕಿಸಿ, ಮಾಹಿತಿ ನೀಡಿ. ಆಕೆಯನ್ನು ಹಿಡಿದರೆ 10 ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ.