

ನವದೆಹಲಿ: ಇಂದು (ನ.12) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭೂಕಂಪನದ ಆಗಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ಭೂಮಿ ಕಂಪಿಸಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ, ನೊಯ್ಡಾ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವ ಆಗಿದೆ.
ಭೂಮಿ ಕಂಪಿಸಿದ ಅನುಭವ ಆಗುತ್ತಿದ್ದಂತೆ ಜನರು ಭಯಗೊಂಡಿದ್ದಾರೆ. ಕೂಡಲೇ ಮನೆಯಿಂದ ಹೊರ ಬಂದಿರುವಂತಹ ಘಟನೆಗಳೂ ನಡೆದಿವೆ. ಸದ್ಯ ಒಂದು ವಾರದ ಅಂತರದಲ್ಲಿ ದೆಹಲಿಯಲ್ಲಿ ಎರಡನೇ ಬಾರಿಗೆ ಭೂಮಿ ಕಂಪಿಸಿದೆ. (ಏಜೆನ್ಸೀಸ್)