ಮೇಘಾಲಯದಲ್ಲಿ 5.2 ತೀವ್ರತೆಯ ಭೂಕಂಪ; ಬಂಗಾಳ, ಅಸ್ಸಾಂನಲ್ಲಿ ಕಂಪನದ ಅನುಭವ!

Untitled design - 2023-10-02T200621.836
Published on

ಮೇಘಾಲಯ: ಮೇಘಾಲಯದಲ್ಲಿ ಸೋಮವಾರ (ಅ.2) ಸಂಜೆ ಸರಿಸುಮಾರು 6:15ಕ್ಕೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ಪ್ರಕಟಿಸಿದ್ದು, ರಾಜ್ಯದ ಉತ್ತರ ಗಾರೋ ಬೆಟ್ಟಗಳಲ್ಲಿ ಭೂಕಂಪನ ಉಂಟಾಗಿದೆ ಎಂದು ತಿಳಿಸಿದೆ.

ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದ್ದು, ಹರಿಯಾಣದ ಕೆಲವು ಭಾಗಗಳಲ್ಲಿ ಭಾನುವಾರ ಲಘು ಭೂಕಂಪ ಸಂಭವಿಸಿದೆ.

ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭಾನುವಾರ ರಾತ್ರಿ 11.26ಕ್ಕೆ 2.6 ತೀವ್ರತೆಯ ಭೂಕಂಪ ಉಂಟಾಗಿದೆ ಎಂದು ತಿಳಿಸಲಾಗಿದ್ದು, ಭೂಕಂಪದ ಕೇಂದ್ರಬಿಂದು ಹರಿಯಾಣದ ರೋಹ್ಟಕ್‌ನ ಪೂರ್ವ ಆಗ್ನೇಯಕ್ಕೆ 7 ಕಿಮೀ ದೂರದಲ್ಲಿದೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net