ಮಣಿಪುರದ ಉಖ್ರುಲ್​ನಲ್ಲಿ 5.1 ತೀವ್ರತೆಯ ಭೂಕಂಪ

ef
Published on

ಮಣಿಪುರ: ಮಣಿಪುರದ ಉಖ್ರುಲ್​ನಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ. ಸೋಮವಾರ ರಾತ್ರಿ 11.1ಕ್ಕೆ 20 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ. ಜುಲೈ 21 ರಂದು ಉಕ್ರುಲ್ 3.5 ತೀವ್ರತೆಯ ಮತ್ತೊಂದು ಭೂಕಂಪಕ್ಕೆ ಸಾಕ್ಷಿಯಾಗಿತ್ತು.

ಮಂಗಳವಾರ ಅಂಡಮಾನ್ ಸಮುದ್ರದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. NCS ಪ್ರಕಾರ, ಮಂಗಳವಾರ ಮುಂಜಾನೆ 3.39 ಕ್ಕೆ ಭೂಕಂಪ ಸಂಭವಿಸಿದೆ ಮತ್ತು 93 ಕಿ.ಮೀ ಆಳದಲ್ಲಿ ಸಂಭವಿಸಿದೆ.


ಒಂದು ದಿನದ ಹಿಂದಷ್ಟೆ ಇಂಡೋನೇಷ್ಯಾದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ, ಈ ವರ್ಷ ಏಪ್ರಿಲ್​ನಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿತ್ತು, ಸುನಾಮಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ಮೊರಾಕೋದಲ್ಲಿ ಭೂಕಂಪದಿಂದ 2,700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 6.8 ತೀವ್ರತೆಯ ಭೂಕಂಪ ಸಂಭವಿಸಿತ್ತು.


ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಮುಂಜಾನೆ, 4.4 ತೀವ್ರತೆಯ ಮತ್ತೊಂದು ಭೂಕಂಪ ವರದಿಯಾಗಿದೆ. ಭೂಕಂಪವು 70 ಕಿಮೀ ಆಳದಲ್ಲಿ ದಾಖಲಾಗಿದೆ ಎಂದು ದೇಶದಲ್ಲಿ ಭೂಕಂಪದ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಕೇಂದ್ರ ಸರ್ಕಾರದ ನೋಡಲ್ ಏಜೆನ್ಸಿಯಾದ ಎನ್‌ಸಿಎಸ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net