ನೇಪಾಳ ಸೇರಿ ಭಾರತದ ಹಲವು ಭಾಗಗಳಲ್ಲಿ ಭೂಕಂಪನ; 5.0 ತೀವ್ರತೆ ದಾಖಲು | Earthquake

dk - 2025-04-04T211440.517
Published on

Earthquake : ನೇಪಾಳದಲ್ಲಿ ಶುಕ್ರವಾರ(ಏ.04) ಸಂಜೆ 5.0 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಉತ್ತರ ಭಾರತದ ಹಲವು ಭಾಗಗಳಲ್ಲಿ ಲಘು ಕಂಪನವಾಗಿದೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸ್ಥಳೀಯ ಸಮಯ ಸಂಜೆ 7.52 ಕ್ಕೆ 20 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಟ್ವೀಟ್​(ಎಕ್ಸ್​​)ಮಾಡಿದೆ.

ಈ ಕುರಿತು ಎಕ್ಸ್​ನಲ್ಲಿ ಹಂಚಿಕೊಂಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ, '' 04/04/2025 19:52:53 IST, ಅಕ್ಷಾಂಶ: 28.83 N, ಉದ್ದ: 82.06 E, ಆಳ: 20 ಕಿ.ಮೀ, ಸ್ಥಳ: ನೇಪಾಳ" ಎಂದು ಭೂಕಂಪನದ ಬಗ್ಗೆ ಮಾಹಿತಿ ನೀಡಿದೆ.

ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಕೆಲವರು, ಉತ್ತರ ಪ್ರದೇಶದ ಗೋರಖ್​​ಪುರದಲ್ಲಿ ಭೂಕಂಪನದ ಅನುಭವಾಗಿದೆ ಎಂದು ನೆಟ್ಟಿಗರ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಬಿಹಾರದ ಪಟ್ನಾದಲ್ಲಿ ಕೂಡ ಭೂಮಿ ನಡುಗಿದ ಅನುಭವಾಗಿದೆ ಎಂದಿದ್ದಾರೆ(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net