ನೇಪಾಳದಲ್ಲಿ ಭೂಕಂಪ: ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲು

Earthquake
Published on

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆ ದಾಖಲಾಗಿದೆ.

ಭಾನುವಾರ ಬೆಳಳಗ್ಗೆ 7.39ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಧಾಡಿಂಗ್​ನಲ್ಲಿದೆ ಎಂದು ತಿಳಿದುಬಂದಿದೆ.

ಗಿನ ಭೂಕಂಪನವು ಟಿಬೆಟ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಪರ್ವತಶ್ರೇಣಿಯ ಮೇಲೆ ನೆಲೆಗೊಂಡಿದೆ. ಪ್ರತಿ ಶತಮಾನಕ್ಕೂ ಎರಡು ಮೀಟರ್‌ಗಳಷ್ಟು ಒಂದಕ್ಕೊಂದು ಹತ್ತಿರವಾಗುತ್ತವೆ. ಇದು ಭೂಕಂಪನಗಳ ರೂಪದಲ್ಲಿ ಬಿಡುಗಡೆಯಾಗುವ ಒತ್ತಡಕ್ಕೆ ಕಾರಣವಾಗುತ್ತದೆ.

ಬಾಗ್ಮತಿ ಹಾಗೂ ಗಂಡಕಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಸಹ ಕಂಪನದ ಅನುಭವವಾಗಿದೆ. ಕಂಪನದಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. 2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪ ಉಂಟಾಗಿತ್ತು. ಇದರಲ್ಲಿ 9ಸಾವಿರ ಮಂದಿ ಮೃತಪಟ್ಟಿದ್ದರು.

ಇನ್ನು ಹಿಮಾಲಯ ತಪ್ಪಲಿನ ಈ ದೇಶದಲ್ಲಿ ಭೂಕಂಪ ಸಾಮಾನ್ಯ ಎನ್ನುವಂತಾಗಿದೆ. ನೇಪಾಳವು ವಿಶ್ವದ 11ನೇ ಅತಿ ಹೆಚ್ಚು ಭೂಕಂಪನ ಪೀಡಿತ ರಾಷ್ಟ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net