

ಮಂಗಳೂರು: ಕೊಡಗು, ಸುಳ್ಯ ಗಡಿಪ್ರದೇಶವಾದ ಚೆಂಬು, ತೊಡಿಕಾನ ಮೊದಲಾದ ಕಡೆ ಶುಕ್ರವಾರ ಬೆಳಗ್ಗೆ 10.09 ಕ್ಕೆ ಭೂಮಿ ಕಂಪಿಸಿದ ಅನುಭವವಾಗಿದೆ.
ದೊಡ್ಡ ಶಬ್ದದೊಂದಿಗೆ ಕಂಪನದ ಅನುಭವವಾಗಿದೆ ಎಂದು ಆ ಭಾಗದವರು ಅನುಭವ ಹಂಚಿಕೊಂಡಿದ್ದಾರೆ. ವಾಹನದಲ್ಲಿ ಹೋಗುತ್ತಿದ್ದವರಿಗೆ ಗುಂಡಿಗೆ ಬಿದ್ದಂತಹ ಅನುಭವವಾಗಿದೆ. ಕೆಲವು ಮನೆಗಳಲ್ಲಿ ಪಾತ್ರೆಗಳು ಅಲುಗಾಡಿವೆ. ಕುಳಿತುಕೊಂಡಿದ್ದವರಿಗೆ ನೆಲದಡಿಯಲ್ಲಿ ಗುದ್ದಿದ ಅನುಭವವಾಗಿದೆ.
.