

| ಕೆ.ಎನ್.ರಾಘವೇಂದ್ರ ಮಂಡ್ಯ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂ ಕಿಸಾನ್ ಯೋಜನೆಯಡಿ ಪರಿಹಾರ ಪಡೆಯಬೇಕಾದಲ್ಲಿ ರೈತರಿನ್ನು ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಇದಕ್ಕಾಗಿ ಮಾರ್ಚ್ 31ರವರೆಗೆ ಗಡುವು ನಿಗದಿಪಡಿಸಲಾಗಿದ್ದು, ಸೂಚನೆ ಪಾಲಿಸದಿದ್ದರೆ ಆರ್ಥಿಕ ನೆರವು ಸ್ಥಗಿತಗೊಳ್ಳಲಿದೆ. ನೆರವು ನೀಡಲು ನೈಜ ಫಲಾನುಭವಿಗಳನ್ನು ಆಯ್ಕೆ ಮಾಡುವ ಉದ್ದೇಶದಿಂದ ಕೇಂದ್ರ ಈ ಹೊಸ ಆದೇಶ ಹೊರಡಿಸಿದೆ.
ಇ-ಕೆವೈಸಿ ಲಾಭವೇನು?: ಇ-ಕೆವೈಸಿ ಮಾಡಿಕೊಂಡರೆ ಅರ್ಹ ರೈತರ ಖಚಿತ ಮಾಹಿತಿ ಲಭ್ಯವಾಗಲಿದೆ. ಇದಕ್ಕಾಗಿ ಆಧಾರ್ ಕಾರ್ಡ್ ಸಂಖ್ಯೆ ಲಿಂಕ್ ಮಾಡಬೇಕಿದೆ. ಒಂದೇ ಕುಟುಂಬದ ಹಲವರ ಹೆಸರಿನಲ್ಲಿ ಆರ್ಟಿಸಿ ಇದ್ದ ಕಾರಣ ಎರಡು ಅಥವಾ ಮೂರು ಜನರು ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು. ಆದರೆ, ಈ ಬಾರಿ ಆಧಾರ್ ಲಿಂಕ್ ಮಾಡುವುದರಿಂದ ಕುಟುಂಬದ ಮಾಹಿತಿ ಲಭ್ಯವಾಗುವುದರಿಂದ ಎಷ್ಟೇ ಜನರ ಹೆಸರಿನಲ್ಲಿ ಆರ್ಟಿಸಿಗಳಿದ್ದರೂ ಒಬ್ಬರಿಗಷ್ಟೇ ನೆರವು ಸಿಗಲಿದೆ. ಐಟಿ ಕಟ್ಟುತ್ತಿರುವವರ ಮಾಹಿತಿಯೂ ಲಭ್ಯವಾಗಲಿದೆ.