ಕೆ.ಜೆ ಜಾರ್ಜ್‌ಗೆ ಮತ್ತೆ ಸಂಕಷ್ಟ: CBI ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ ಕೋರ್ಟ್​

918153
Published on

ಬೆಂಗಳೂರು: ಡಿವೈಎಸ್​ಪಿ ಗಣಪತಿ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್​ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಇದರೊಂದಿಗೆ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್​ ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಭಾರಿ ಹಿನ್ನಡೆಯಾಗಿದೆ. ಅವರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಇತ್ತೀಚೆಗೆ ಕೋರ್ಟ್​ಗೆ ಬಿ ರಿಪೋರ್ಟ್ ಸಲ್ಲಿಸಿತ್ತು. ಆದರೆ, ಕೋರ್ಟ್ ಅದನ್ನು ತಿರಸ್ಕರಿಸಿದೆ. ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದರಿಂದ ಕೊಂಚ ನಿರಾಳರಾಗಿದ್ದ ಕೆ.ಜೆ.ಎಸ್ ಜಾರ್ಜ್​ ಅವರ ಜತೆಗೆ ಐಪಿಎಸ್ ಅಧಿಕಾರಿಗಳಾದ ಪ್ರಣಬ್ ಮೊಹಾಂತಿ ಮತ್ತು ಪ್ರಸಾದ್ ಅವರಿಗೆ ಈ ಬೆಳವಣಿಗೆ ಕಂಟಕವನ್ನು ತಂದಿಟ್ಟಿದೆ.

ಸಿಬಿಐ ನಡೆಯನ್ನು ಗಣಪತಿ ಅವರ ಮಗ ಪ್ರಶ್ನಿಸಿದ್ದರಿಂದಾಗಿ ಬಿ ರಿಪೋರ್ಟ್ ಅನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ಇದರೊಂದಿಗೆ ಡಿವೈಎಸ್​ಪಿ ಗಣಪತಿ ಅವರ ಅಸಹಜ ಸಾವಿನ ಪ್ರಕರಣ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net