ಶ್ರೀಲಕ್ಷ್ಮೀನರಸಿಂಹ ದೇಗುಲದಲ್ಲಿ ದ್ವಾದಶಿ ಆಚರಣೆ

dharmika (5)
ಭದ್ರಾವತಿಯ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ದ್ವಾದಶಿ ಆಚರಿಸಲಾಯಿತು. ಪ್ರಧಾನ ಅರ್ಚಕ ರಂಗನಾಥ ಶರ್ಮ, ಸಹಾಯಕ ಅರ್ಚಕ ಶ್ರೀನಿವಾಸ್, ಜಿ.ರಮಾಕಾಂತ, ಅನಂತಾಚಾರ್, ಸತೀಶ, ನಾರಾಯಣಾಚಾರ್ ಇತರರಿದ್ದರು.
Published on

ಭದ್ರಾವತಿ: ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಮುಕ್ಕೋಟಿ ದ್ವಾದಶಿ ಹಬ್ಬ ಆಚರಿಸಲಾಯಿತು.ಧನುರ್ಮಾಸದ ಪೂಜೆ ಅಂಗವಾಗಿ ಬೆಳಗ್ಗೆ ದೇವಾಲಯದ ಒಳಗಿರುವ ಶ್ರೀ ವೇಣುಗೋಪಾಲಕೃಷ್ಣನಿಗೆ ಪಂಚಾಮೃತ ಅಭಿಷೇಕ, ಅರಿಶಿಣದ ಅಲಂಕಾರ ಮಾಡಿದ ನಂತರ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.

ಸಂಜೆ ಭೂದೇವಿ, ಶ್ರೀದೇವಿಯರನ್ನು ಒಳಗೊಂಡ ಶ್ರೀನಿವಾಸ ದೇವರ ಮೂರ್ತಿಯನ್ನು ರಥಬೀದಿಯಲ್ಲಿ ಮಂಗಳವಾದ್ಯ ಸಹಿತ ಉತ್ಸವ ಮಾಡಲಾಯಿತು. ಮೆರವಣಿಗೆ ದೇವಾಲಯಕ್ಕೆ ಬಂದ ನಂತರ ಉತ್ಸವ ಮೂರ್ತಿಯನ್ನು ವೈಕುಂಠ ಏಕಾದಶಿ ಪ್ರಯುಕ್ತ ನಿರ್ಮಿಸಲಾಗಿದ್ದ ರಾಜಗೋಪುರದ ಪ್ರವೇಶದ್ವಾರದಲ್ಲಿ ಉಯ್ಯಲೆಯಲ್ಲಿರಿಸಿ ಮಂಗಳಾರತಿ ಮಾಡಿ, ಭಕ್ತರಿಗೆ ಲಕ್ಷ್ಮೀಸಹಿತನಾದ ವೈಕುಂಠನಾಥನ ದರ್ಶನಕ್ಕೆ ಅವಕಾಶ ನೀಡಲಾಯಿತು. ಮಂಗಳಾರತಿ, ಅಷ್ಟಾವಧಾನ ಸೇವೆ, ವೇದಮಂತ್ರ ಪಠಣವನ್ನು ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ನೆರವೇರಿಸಿದರು.

ಸಹಾಯಕ ಅರ್ಚಕ ಶ್ರೀನಿವಾಸ್, ಧಾರ್ಮಿಕ ಪರಿಷತ್ ಸದಸ್ಯ ಜಿ.ರಮಾಕಾಂತ, ಅನಂತಾಚಾರ್, ಸತೀಶ, ನಾರಾಯಣಾಚಾರ್, ನರಸಿಂಹಾಚಾರ್, ನಂದನ್, ಅಭಿರಾಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net